ಕೂಡಿಗೆ, ಏ. ೩: ನಂಜರಾಯ ಪಟ್ಟಣ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹೆಚ್.ವೈ. ರತ್ನ ನಿವೃತ್ತಿ ಹೊಂದಿದ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ವಿವಿಧ ಶಾಲೆಗಳಲ್ಲಿ ಕಳೆದ ೩೫ ವರ್ಷಗಳ ಕಾಲ ಶಿಕ್ಷಣ ಸೇವೆ ಸಲ್ಲಿಸಿದ ಹೆಚ್.ವೈ. ರತ್ನ ಮತ್ತು ದೊಡ್ಡಯ್ಯ ದಂಪತಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದದವರು ಸನ್ಮಾನಿಸಿ ಗೌರವಿಸಿ, ಬೀಳ್ಕೊಡುಗೆ ನೀಡಿದರು. ಶಾಲಾ ಆವರಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭವನ್ನು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೂಡಿಗೆ, ಏ. ೩: ನಂಜರಾಯ ಪಟ್ಟಣ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹೆಚ್.ವೈ. ರತ್ನ ನಿವೃತ್ತಿ ಹೊಂದಿದ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ವಿವಿಧ ಶಾಲೆಗಳಲ್ಲಿ ಕಳೆದ ೩೫ ವರ್ಷಗಳ ಕಾಲ ಶಿಕ್ಷಣ ಸೇವೆ ಸಲ್ಲಿಸಿದ ಹೆಚ್.ವೈ. ರತ್ನ ಮತ್ತು ದೊಡ್ಡಯ್ಯ ದಂಪತಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದದವರು ಸನ್ಮಾನಿಸಿ ಗೌರವಿಸಿ, ಬೀಳ್ಕೊಡುಗೆ ನೀಡಿದರು. ಶಾಲಾ ಆವರಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭವನ್ನು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸೇವೆಯ ಬಗ್ಗೆ ಸಾರ್ವಜನಿಕರು ಮರೆತು ಬಿಡುವುದು ವಿಷಾದಕರ ಸಂಗತಿ. ಸರಕಾರಿ ನೌಕರರು ನಿವೃತ್ತಿಯ ನಂತರ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಮಾತ ನಾಡಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಸಮೀರ, ಸದಸ್ಯೆ ಕುಸುಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಂಬು, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಂಜು ನಾಥ್, ತಾಲೂಕು ಅಧ್ಯಕ್ಷ ಬಸವರಾಜು, ಅಕ್ಷರ ದಾಸೋಹ ಅಧಿಕಾರಿಗಳಾದ ಕೃಷ್ಣಪ್ಪ, ಹೇಮಂತ್, ಇಸಿಒ ರಾಧಾಕೃಷ್ಣ, ಶಿಕ್ಷಕರ ಸಂಘದ ಸದಸ್ಯರುಗಳಾದ ಸೌಭಾಗ್ಯ, ಸುರೇಶ್, ಗಿರೀಶ್, ಜಯಂತಿ, ಶಾಲಾ ಹಿರಿಯ ಶಿಕ್ಷಕರಾದ ಮೀನಾಕ್ಷಿ, ಪುಷ್ಪಾ, ದಾನಿ ಗಣಪತಿ ಮತ್ತಿತರರು ಇದ್ದರು. ಈ ಸಂದರ್ಭ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.