ನಾಪೋಕ್ಲು, ಏ. ೩: ಸಮೀಪದ ಹೊದ್ದೂರು ಗ್ರಾಮದ ಭಗವತಿ ದೇವಳದ ಬಳಿ ಚಾಮುಂಡಿ ಕೋಲ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮಧ್ಯಾಹ್ನ ವಿವಿಧ ಸಾಂಪ್ರದಾಯಿಕ ಆಚರಣೆಗಳನ್ನು ದೇವಳದ ಸಮೀಪವಿರುವ ಗುಡಿಯ ಬಳಿ ನೆರವೇರಿಸಲಾಯಿತು.

ಮಾರ್ಚ್ ೨೮ ರಿಂದ ವಿವಿಧ ಆಚರಣೆಗಳೊಂದಿಗೆ ಹೊದ್ದೂರು ಭಗವತಿ ದೇವರ ವಾರ್ಷಿಕ ಉತ್ಸವ ಆರಂಭಗೊAಡಿತ್ತು. ಸಂಪ್ರದಾಯ ದಂತೆ ವಿವಿಧ ಕೋಲಗಳಿಗೂ ಮೊದಲು ಭಗವತಿ ದೇವಾಲಯದಲ್ಲಿ ದೇವಿಯ ಉತ್ಸವ ಜರುಗಬೇಕಿತ್ತು. ಆದರೆ ದೇವಾಲಯದ ಪುನರ್ ನಿರ್ಮಾಣ ಕಾರ್ಯಗಳು ನಡೆಯುತ್ತಿರುವುದರಿಂದ ದೇವರ ಉತ್ಸವ ಈ ವರ್ಷ ನಡೆಸುತ್ತಿಲ್ಲ ಎಂದು ದೇವಾಲಯದ ತಕ್ಕಮುಖ್ಯಸ್ಥರು ತಿಳಿಸಿದರು. ಐದು ದಿನಗಳ ಕಾಲ ನಡೆದ ನಾಡು ಭಗವತಿ ದೇವರ ಉತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ದೇವಾಲಯದ ಪ್ರಧಾನ ಅರ್ಚಕ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.