ಮಡಿಕೇರಿ, ಏ. ೩: ಕಾಲೂರಿನ ಸುಂದರ ಪರಿಸರದ ನಡುವೆ ಕೊಡವ ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ಪ್ರದರ್ಶಿತವಾಗಿ ನೋಡುಗರ ಮನಸೂರೆಗೊಂಡವು.
ಭಾರತೀಯ ವಿದ್ಯಾಭವನ ಮತ್ತು ಇನ್ಫೋಸೀಸ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಭಾರತೀಯ ವಿದ್ಯಾಭವನದ ಯಶಸ್ವಿ ಕ್ಯಾಂಪಸ್ನಲ್ಲಿ ಆಯೋಜಿತವಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಲೂರು ಗ್ರಾಮದ ಮುತ್ತುನಾಡು ಅಭಿಮಾನಿ ಒಕ್ಕೂಟ, ಪೊಮ್ಮಕ್ಕಡ ಒಕ್ಕೂಟದ ಕಲಾವಿದರು ಪ್ರದರ್ಶಿಸಿದ ನೃತ್ಯ, ಹಾಡುಗಳು ಗ್ರಾಮಸ್ಥರು, ಕಲಾಪ್ರೇಮಿಗಳ ಮೆಚ್ಚುಗೆ ಗಳಿಸಿದವು.ಕೊಡಗಿನ ಪ್ರಾಚೀನ ಕಲಾಪ್ರಕಾರಗಳಿಗೆ ಜೀವಂತಿಕೆ ತುಂಬುತ್ತಲೇ ಇರುವ ಕಾಲೂರು ಹಳ್ಳಿಯ ಕಲಾವಿದರು ಉಮ್ಮತ್ತಾಟ್, ಕತ್ತಿಯಾಟ್, ವಾಲಗತ್ತಾಟ್ ಪ್ರದರ್ಶಿಸಿದರು. ಅಂತೆಯೇ ತಾಲಿಪಾಟ್ ಹಾಗೂ ಕೊಡವ ಹಾಡುಗಳು ಕೂಡ ವೀಕ್ಷಕರ ಮನಮೆಚ್ಚುಗೆ ಗಳಿಸಿದವು. ಕೊಡವ ಜನಾಂಗವು ತಮ್ಮ ಸಂಪ್ರದಾಯಿಕ ಕಲೆಯ ಬಗ್ಗೆ ಹೊಂದಿರುವ ಅಭಿಮಾನ ಮತ್ತು ಇಂದಿಗೂ ಪರಂಪರಾಗತ ಕಲೆಯನ್ನು ಲವಲವಿಕೆಯಿಂದ ಮುಂದುವರೆಸಿಕೊAಡು ಬರುತ್ತಿರುವ ಬಗ್ಗೆ ಭಾರತೀಯ ವಿದ್ಯಾಭವನದ ನಿರ್ದೇಶಕರಾz ಅಶೋಕ್ ಕುಮಾರ್, ನಾಗಲಕ್ಷಿö್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಜೆಕ್ಟ್ ಕೂರ್ಗ್ನ ನಿರ್ದೇಶಕಿ ನಯನ ಕಶ್ಯಪ್ ಸ್ವಾಗತಿಸಿ, ಗೌರಿ ಕಶ್ಯಪ್, ಭುವನೇಶ್ವರಿ ಅಶೋಕ್ ನಿರೂಪಿಸಿದರು. ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಗೌರವ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಹಾಜರಿದ್ದರು.
ಇಂದು ಕೊಳಲು ವಾದನ
ಕಾಲೂರಿನ ಯಶಸ್ವಿನಿ ಕ್ಯಾಂಪಸ್ನಲ್ಲಿ ಭಾರತೀಯ ವಿದ್ಯಾಭವನ ಇನ್ಫೋಸೀಸ್ ಫೌಂಡೇಷನ್ ವತಿಯಿಂದ ತಾ. ೪ ರಂದು (ಇಂದು) ಸಂಜೆ ೪.೩೦ ಗಂಟೆಗೆ ಸಾಂಸ್ಕತಿಕ ಕಾರ್ಯಕ್ರಮ ಆಯೋಜಿತವಾಗಿದೆ. ಹೆಸರಾಂತ ವಿದ್ಯಾನ್ ಹೇಮಂತ-ಹೇರAಭ ಸಹೋದರರ ಕೊಳಲು ವಾದನ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದಲ್ಲಿ ಶಾಸಕ ಕೆ.ಜಿ. ಬೋಪಯ್ಯ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ ಪಾಲ್ಗೊಳ್ಳಲಿದ್ದಾರೆ.