ಸಿದ್ದಾಪುರ, ಏ. ೧: ಎಸ್.ಬಿ.ಸಿ. ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಎಸ್‌ಬಿಸಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾಟ ಸಿದ್ದಾಪುರದಲ್ಲಿ ತಾ. ೩ ಮತ್ತು ೪ ರಂದು ನಡೆಯಲಿದೆ ಎಂದು ಕ್ಲಬ್ ವ್ಯವಸ್ಥಾಪಕ ದಿಜಿತ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಿದ್ದಾಪುರದ ಎಸ್‌ಬಿಸಿ ಕೋರ್ಟ್ನಲ್ಲಿ ಪಂದ್ಯಾಟ ನಡೆಯಲಿದ್ದು ಕೊಡಗಿನಲ್ಲಿ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಲೀಗ್ ಪಂದ್ಯಾಟ ಆಯೋಜಿಸಲಾಗಿದೆ. ವಿಜೇತರಿಗೆ ಮೊದಲನೇ ಬಹುಮಾನವಾಗಿ ರೂ. ೨೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.