ಸೋಮವಾರಪೇಟೆ, ಏ.೧: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಉತ್ತರ ಕೊಡಗಿನಿಂದ ಅತೀ ಹತ್ತಿರದ ಮಾರ್ಗವಾಗಿರುವ ಬಿಸಿಲೆ ಘಾಟ್ ರಸ್ತೆಯನ್ನು ತಾತ್ಕಾಲಿಕವಾಗಿ ಒಂದು ತಿಂಗಳ ಕಾಲ ಬಂದ್ ಮಾಡಲಾಗಿದೆ.

ಕೊಡಗು-ಹಾಸನ-ದಕ್ಷಿಣ ಕನ್ನಡ ಜಿಲ್ಲೆಗಳನ್ನು ಬೆಸೆಯುವ ಬಿಸಿಲೆ ಘಾಟ್ ಹೆದ್ದಾರಿಯಲ್ಲಿ ಉಳಿಕೆಯಾಗಿರುವ ೨ ಕಿ.ಮೀ. ರಸ್ತೆ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಹಿನ್ನೆಲೆ ಸದ್ಯಕ್ಕೆ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಕೊಡಗಿನ ಶಾಂತಳ್ಳಿ, ಕುಂದಳ್ಳಿ ಮಾರ್ಗದ ಮೂಲಕ ಸಕಲೇಶಪುರದ ಪಟ್ಲ, ಮಂಕನಹಳ್ಳಿ, ಬಿಸಿಲೆ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು ಹಾಗೂ ಶನಿವಾರಸಂತೆ-ಕೊಡ್ಲಿಪೇಟೆ ವ್ಯಾಪ್ತಿಯಿಂದ ಕೂಡುರಸ್ತೆ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣಕ್ಕೆ ತೆರಳುತ್ತಿದ್ದ ವಾಹನಗಳು ಮುಂದಿನ ೧ ತಿಂಗಳ ಕಾಲ ಬದಲಿ ಮಾರ್ಗವನ್ನು ಅವಲಂಭಿಸಬೇಕಾಗಿದೆ.

ಪಶ್ಚಿಮ ಘಟ್ಟದ ದಟ್ಟಾರಣ್ಯದ ಸೊಬಗನ್ನು ಆಸ್ವಾದಿಸಿ, ಬಿಸಿಲೆಯ ಬ್ಯೂಟಿ ಸ್ಪಾಟ್‌ನ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಮಾರ್ಗವಾಗಿ ದಿನನಿತ್ಯ ನೂರಾರು ಪ್ರವಾಸಿ ವಾಹನಗಳು, ಸರಕು ಸಾಗಾಣಿಕೆಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಹದಗೆಟ್ಟಿದ್ದ ಈ ರಸ್ತೆಯನ್ನು ಕಳೆದ ಕೆಲ ವರ್ಷಗಳ ಹಿಂದೆ ಕಾಂಕ್ರಿಟೀಕರಣ/ ಡಾಂಬರೀಕರಣ ಮಾಡಲಾಗಿದ್ದು, ನಡುವಿನ ೨ ಕಿ.ಮೀ. ರಸ್ತೆಯನ್ನು ಹಾಗೆಯೇ ಬಿಡಲಾಗಿತ್ತು.

ಇದೀಗ ಮತ್ತೆ ಕಾಮಗಾರಿ ಬ್ಯೂಟಿ ಸ್ಪಾಟ್‌ನ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಮಾರ್ಗವಾಗಿ ದಿನನಿತ್ಯ ನೂರಾರು ಪ್ರವಾಸಿ ವಾಹನಗಳು, ಸರಕು ಸಾಗಾಣಿಕೆಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಹದಗೆಟ್ಟಿದ್ದ ಈ ರಸ್ತೆಯನ್ನು ಕಳೆದ ಕೆಲ ವರ್ಷಗಳ ಹಿಂದೆ ಕಾಂಕ್ರಿಟೀಕರಣ/ ಡಾಂಬರೀಕರಣ ಮಾಡಲಾಗಿದ್ದು, ನಡುವಿನ ೨ ಕಿ.ಮೀ. ರಸ್ತೆಯನ್ನು ಹಾಗೆಯೇ ಬಿಡಲಾಗಿತ್ತು.

ಇದೀಗ ಮತ್ತೆ ಕಾಮಗಾರಿ ಉತ್ತರ ಕೊಡಗು ಭಾಗದ ವಾಹನಗಳು ಕೊಡ್ಲಿಪೇಟೆ, ಶುಕ್ರವಾರಸಂತೆ, ದೋಣಿಗಾಲ್, ಗುಂಡ್ಯ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳಬೇಕಿದೆ.