ಶ್ರೀಮಂಗಲ, ಏ. ೨ : ಕೊಡವ ಜನಾಂಗದಲ್ಲಿ ತಮ್ಮ ಮಕ್ಕಳನ್ನು ಸಾಂಸ್ಕೃತಿಕ ಚೌಕಟ್ಟಿನೊಳಗೆ ಬೆಳೆಸುವ ನಿಟ್ಟಿನಲ್ಲಿ ತಾಯಂದಿರ ಪಾತ್ರ ಹಿರಿದಾಗಿದೆ. ಪದ್ಧತಿ-ಪರಂಪರೆಯ ಅನುಸರಣೆಯನ್ನು ತಂದೆ-ತಾಯAದಿರು ಮಕ್ಕಳಿಗೆ ಕಲಿಸಿಕೊಟ್ಟಾಗ ಜನಾಂಗದ ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯವಾಗಲಿದೆ ಎಂದು ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅಭಿಪ್ರಾಯಪಟ್ಟರು.

ಬಾಡಗರಕೇರಿ ಮಹಿಳಾ ಸಮಾಜ ಮತ್ತು ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಜಂಟಿ ಆಶ್ರಯ ದಲ್ಲಿ ಬಾಡಗರಕೇರಿಯ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ಕೊಡವ ಸಾಂಸ್ಕೃತಿಕ ಜಾಗೃತಿ ಕಾರ್ಯ ಕ್ರಮದಲ್ಲಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

(ಮೊದಲ ಪುಟದಿಂದ) ತಮ್ಮ ಸಂಸ್ಕೃತಿಯನ್ನು ಬಿಟ್ಟು ಬದುಕುವುದು ಜನಾಂಗದ ನಾಶಕ್ಕೆ ಕಾರಣವಾಗುತ್ತದೆ. ದೇಶ ಬಿಟ್ಟು ಬಂದರೂ ಟಿಬೇಟ್ ಜನಾಂಗದವರು ತಮ್ಮ ಸಂಸ್ಕೃತಿಯನ್ನು ಬಿಡದೆ ಭಾರತ ದೇಶದಲ್ಲಿ ಬದುಕುತ್ತಿರುವುದು ಆ ಜನಾಂಗಕ್ಕೆ ತಮ್ಮ ಸಂಸ್ಕೃತಿಯ ಮೇಲಿರುವ ಅಭಿಮಾನವನ್ನು ಸಾರುತ್ತದೆ. ಕೊಡವ ಜನಾಂಗದವರು ಎಲ್ಲೇ ಇದ್ದರು ತಮ್ಮ ಸಂಸ್ಕೃತಿ, ತಮ್ಮ ನೆಲ, ಆಚಾರ-ವಿಚಾರ ಮತ್ತು ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ತಂದೆ-ತಾಯAದಿರು ತಮ್ಮ ಮಕ್ಕಳಿಗೆ ಚಿಕ್ಕಂದಿನಿAದಲೇ ಕೊಡವ ಜನಾಂಗದ ಸಂಸ್ಕೃತಿ, ಇತಿಹಾಸ, ಮಹಾನ್ ಪುರುಷರುಗಳು, ಹಬ್ಬಗಳು, ಕೊಡಗಿನ ಭೌಗೋಳಿಕ ಮಹತ್ವದ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಜಾಗೃತಿಗೊಳಿಸಬೇಕು ಎಂದರು.

ಈ ಸಂದರ್ಭ ಬಾಡಗರಕೇರಿ ಸಹಕಾರ ಮಹಿಳಾ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಯರಾದ ಅಣ್ಣೀರ ಲಲಿತಾ ಮುತ್ತಣ್ಣ ಮತ್ತು ಕಾಯಪಂಡ ಪೊನ್ನಮ್ಮ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.

ವಿಚಾರ ಗೋಷ್ಠಿ : “ಮಕ್ಕಳ ನಂಗಡ ಪದ್ಧತಿ ಪರಂಪರೆ ಚೌಕಟ್ಟ್ರೊಳ್‌ಲ್ ಬೊಳ್‌ತುವಲ್ಲಿ ಅಪ್ಪವ್ವಂಗಡ ಜವಾಬ್ದಾರಿ” ಎಂಬ ವಿಷಯದಲ್ಲಿ ಚೋನಿರ ಪಾವನ ಸುಬ್ರಮಣಿ ವಿಚಾರ ಮಂಡನೆ ಮಾಡಿದರು.

ವಿವಿಧ ಸ್ಪರ್ಧೆ : ಕೊಡವ ಆಹಾರ ಪದ್ಧತಿಯಲ್ಲಿ ಬರುವ ವಿವಿಧ ಆಹಾರ ತಯಾರಿಕೆ ಪೈಪೋಟಿ, ವಿಷಯ ಆಯ್ದು ಮಾತನಾಡುವ ಪೈಪೋಟಿ, ರಸಪ್ರಶ್ನೆ ಪೈಪೋಟಿ ನಡೆಯಿತು.

ವೇದಿಕೆಯಲ್ಲಿ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಉಪಾಧ್ಯಕ್ಷೆ ಮಳವಂಡ ಪೂವಮ್ಮ ಮುತ್ತಪ್ಪ, ಬಾಡಗರಕೇರಿ ಮಹಿಳಾ ಸಮಾಜದ ಅಧ್ಯಕ್ಷೆ ಬಲ್ಯಮೀದೇರಿರ ಕೌಶಿ ಮಂಜು, ನಿರ್ದೇಶಕಿ ತೀತಿರ ಊರ್ಮಿಳ ಸೋಮಯ್ಯ, ಸಲಹೆಗಾರ ಮಲ್ಲೇಂಗಡ ಪೆಮ್ಮಯ್ಯ, ಪರಿಷತ್ ನಿರ್ದೇಶಕಿಯರಾದ ಮನ್ನೇರ ಸರಸ್ವತಿ ರಮೇಶ್, ಕಡೇಮಾಡ ಕವಿತಾ, ಅಜ್ಜಿಕುಟ್ಟೀರ ಶಾಂತಿ, ಬಲ್ಯಾಟಂಡ ಆರತಿ, ಮಹಿಳಾ ಸಮಾಜದ ಕಾರ್ಯದರ್ಶಿ ಅಣ್ಣೀರ ಮಲ್ಲಿಗೆ ಪೂಣಚ್ಚ ಹಾಜರಿದ್ದರು. ಮಲ್ಲೇಂಗಡ ರೂಪ ಪ್ರಾರ್ಥಿಸಿದರು. ಮಹಿಳಾ ಸಮಾಜದ ಸದಸ್ಯೆ ಮಲ್ಲೇಂಗಡ ರೀನಾಸನ್ನಿ ಸ್ವಾಗತಿಸಿ, ಪೊಮ್ಮಕ್ಕಡ ಪರಿಷತ್ತ್ನ ನಿರ್ದೇಶಕಿ ತೀತಿರ ಊರ್ಮಿಳ ಸೋಮಯ್ಯ ನಿರೂಪಿಸಿ, ಅಜ್ಜಿಕುಟ್ಟೀರ ಶಾಂತಿ ವಂದಿಸಿದರು.