ಯಡಿಯೂರಪ್ಪ ವಿರುದ್ಧ ತನಿಖೆಗೆ ಹೈಕೋರ್ಟ್ ಅನುಮತಿ

ಬೆಂಗಳೂರು, ಮಾ. ೩೧: ಶಾಸಕರಿಗೆ ಹಣದ ಆಮಿಷ ಒಡ್ಡಿ ಆಪರೇಷನ್ ಕಮಲ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಆಪರೇಷನ್ ಕಮಲ ಪ್ರಕರಣಕ್ಕೆ ಸಂಬAಧಿಸಿದAತೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಎಫ್‌ಐಆರ್‌ಗೆ ತಡೆ ಕೋರಿ ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಈಗ ತಡೆಯಾಜ್ಞೆ ತೆರವುಗೊಳಿಸಿರುವ ಹೈಕೋರ್ಟ್, ಸಿಎಂ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಿದೆ. ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಯಡಿಯೂರಪ್ಪ ವಿರುದ್ಧದ ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆಗೆ ಆದೇಶ ನೀಡಿದೆ. ನಮ್ಮ ತಂದೆಯ ಕಡೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಹಣದ ಆಮಿಷವೊಡ್ಡಲಾಗಿತ್ತು ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡ ಪಾಟೀಲ್ ಕಂದಕೂರ ಅವರು ಬಿ.ಎಸ್. ಯಡಿಯೂರಪ್ಪ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ಈ ಕುರಿತು ಆಡಿಯೋ ಸಹ ಬಿಡುಗಡೆ ಮಾಡಿದ್ದರು.

ತನಿಖೆಗೆ ಪೂರ್ಣ ಸ್ವಾತಂತ್ರö್ಯ:ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು, ಮಾ. ೩೧: ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ವಶಕ್ಕೆ ಪಡೆಯಬೇಕೋ ಬೇಡವೋ ಎಂಬುದನ್ನು ಎಸ್‌ಐಟಿ ನಿರ್ಧರಿಸುತ್ತದೆ. ತಾವು ಕಾನೂನು ಮತ್ತು ಗೃಹ ಸಚಿವನಾದರೂ ತನಿಖೆ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಎಸ್‌ಐಟಿ ತನ್ನ ಕೆಲಸ ಮಾಡುತ್ತಿದೆ. ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ‍್ಯ ಕೊಟ್ಟಿದ್ದೇವೆ. ಕಾನೂನಿನ ಪ್ರಕಾರವೇ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಅನಗತ್ಯ ಟೀಕೆ ಪ್ರತಿಭಟನೆ ಮಾಡಿ ಗೊಂದಲ ಸೃಷ್ಟಿಸುತ್ತಿದೆ ಎಂದಿದ್ದಾರೆ.

ಎಸ್.ಐ.ಟಿ.ಯಿಂದ ಸಂತ್ರಸ್ತೆಯ ವಿಚಾರಣೆ

ಬೆಂಗಳೂರು, ಮಾ. ೩೧: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿಗೆ ವೈದ್ಯಕೀಯ ಪರೀಕ್ಷೆ ಹಾಗೂ ಕೌನ್ಸಿಲಿಂಗ್ ನಡೆಸಿದ ಬಳಿಕ ವಿಚಾರಣೆಗೆ ಒಳಪಡಿಸಲಾಯಿತು. ನಗರದ ಆಡುಗೋಡಿಯ ಎಸ್‌ಐಟಿ ಟೆಕ್ನಿಕಲ್‌ನಲ್ಲಿ ತನಿಖಾಧಿಕಾರಿ ಎಸಿಪಿ ಕವಿತಾ ಅವರ ನೇತೃತ್ವದಲ್ಲಿ ಯುವತಿ ವಿಚಾರಣೆ ನಡೆಯಿತು. ಈಗಾಗಲೇ ಮಂಗಳವಾರ ಎಸ್‌ಐಟಿ ಅಧಿಕಾರಿಗಳು ಯುವತಿಗೆ ಪ್ರಾಥಮಿಕ ಹಂತದಲ್ಲಿ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಇದೀಗ ಅದರ ಮುಂದುವರೆದ ಭಾಗವಾಗಿ ವಿಚಾರಣೆಯಾಗಿದೆ. ಯುವತಿಗೆ ರಮೇಶ್ ಜಾರಕಿಹೊಳಿ ಅವರಿಗೆ ಸಂಬAಧಿಸಿದ ಸುಮಾರು ೮೪ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳಲಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ರಮೇಶ್ ಜಾರಕಿಹೊಳಿ ಅವರೊಂದಿಗೆ ಯಾವ ಸರ್ಕಾರಿ ಉದ್ಯೋಗಕ್ಕೆ ಮಾತುಕತೆ ನಡೆದಿತ್ತು? ಅದು ಯಾವ ಹುದ್ದೆ? ತಾವು ಆ ಹುದ್ದೆಗೆ ಈ ಮುಂಚೆ ಅರ್ಜಿ ಸಲ್ಲಿಸಿದ್ದೀರಾ? ಹೀಗೆ ಇತರ ಅನೇಕ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಯುವತಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಯುವತಿಗೆ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಎಸ್‌ಐಟಿ ನಿರ್ದೇಶಿಸಿದ ಐದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಜನರಲ್ ಮೆಡಿಕಲ್ ಟೆಸ್ಟ್, ಲೈಂಗಿಕ ಕ್ರಿಯೆ ಬಗ್ಗೆ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಈಗಾಗಲೇ ಯುವತಿಗೆ ಕೋವಿಡ್ ನೆಗೆಟಿವ್ ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಯುವತಿಯ ಉಗುರು, ಚರ್ಮ, ಕೂದಲು ಹಾಗೂ ರಕ್ತದ ಸ್ಯಾಂಪಲ್ಸ್ ಸಂಗ್ರಹಿಸಲಾಗಿದ್ದು, ಯುವತಿಯ ಧ್ವನಿ, ವಿಡಿಯೋ ತುಣುಕುಗಳನ್ನು ತನಿಖಾಧಿಕಾರಿಗಳು ರವಾನಿಸಿದ್ದಾರೆ.

ಹನ್ಸಾ-ಎನ್‌ಜಿ ತರಬೇತಿ ವಿಮಾನ ಸೇರ್ಪಡೆ

ಬೆಂಗಳೂರು, ಮಾ. ೩೧: ಬೆಂಗಳೂರಿನ ವಿಮಾನ ತರಬೇತಿ ವಲಯಕ್ಕೆ ಇಂದು ಹೊಸ ತಲೆಮಾರಿನ ಹನ್ಸಾ-ಎನ್‌ಜಿ ತರಬೇತಿ ವಿಮಾನ ಸೇರ್ಪಡೆಗೊಂಡಿದೆ. ಸಿಎಸ್‌ಐಆರ್ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್‌ಎಎಲ್) ಸಂಸ್ಥೆ ಹನ್ಸಾ-ಎನ್‌ಜಿ (ಮುಂದಿನ ತಲೆಮಾರಿನ) ವಿಮಾನವನ್ನು ಬುಧವಾರ ಬೇಲೂರು ಕ್ಯಾಂಪಸ್‌ನಲ್ಲಿರುವ ವಿಮಾನ ತರಬೇತಿ ಕೇಂದ್ರಕ್ಕೆ ತಂದಿಳಿಸಿದೆ. ಡಿಜಿ ಸಿಎಸ್‌ಐಆರ್‌ನ ಶೇಖರ್ ಸಿ. ಮಾಂಡೆ, ಹೆಚ್‌ಎಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ಆರ್. ಮಾಧವನ್ ಅವರು ವಿಶೇಷ ಕಾರ್ಯಕ್ರಮದ ಮೂಲಕ ನೂತನ ವಿಮಾನವನ್ನು ಬರಮಾಡಿಕೊಂಡರು. ಈ ತರಬೇತಿ ವಿಮಾನವು ಸ್ಮಾರ್ಟ್ ಮಲ್ಟಿ-ಫಂಕ್ಷನಲ್ ಡಿಸ್ಪ್ಲೇ, ಗ್ಲಾಸ್ ಕಾಕ್‌ಪಿಟ್ ಮತ್ತು ಬಬಲ್ ಮೇಲ್ಚಾವಣಿ ವಿನ್ಯಾಸದೊಂದಿಗೆ ಐಎಫ್‌ಆರ್-ಕಂಪ್ಲೈAಟ್ ಏವಿಯಾನಿಕ್ಸ್ ಅನ್ನು ಹೊಂದಿದೆ. ಡಿಜಿಟಲ್ ನಿಯಂತ್ರಿತ ರೊಟಾಕ್ಸ್ ೯೧೨ ಐಎಸ್ಸಿ ಎಂಜಿನ್‌ನ ಆಯ್ಕೆಯು ವಿಮಾನ ಶ್ರೇಣಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿದೆ.

ಮಿಲಿಟರಿ ಫಾರ್ಮ್ ಬಂದ್

ನವದೆಹಲಿ, ಮಾ. ೩೧: ಸುದೀರ್ಘ ೧೩೨ ವರ್ಷಗಳ ಸೇವೆಯ ನಂತರ, ಮಿಲಿಟರಿ ಫಾರ್ಮ್ಗಳನ್ನು ಬುಧವಾರದಿಂದ ಮುಚ್ಚಲಾಗುವುದು ಎಂದು ಭಾರತೀಯ ಸೇನೆ ಘೋಷಿಸಿದೆ. ಅಂಬಾಲಾ, ಕೋಲ್ಕತಾ, ಶ್ರೀನಗರ, ಆಗ್ರಾ, ಪಠಾಣ್‌ಕೋಟ್, ಲಖನೌ, ಮೀರತ್, ಅಲಹಾಬಾದ್ ಮತ್ತು ಗುವಾಹಟಿಯಂತಹ ಹಲವು ನಗರಗಳಲ್ಲಿ ದೇಶಾದ್ಯಂತ ೨೦,೦೦೦ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮಿಲಿಟರಿ ಫಾರ್ಮ್ಗಳಿದ್ದು, ಅವುಗಳನ್ನು ಈಗ ಬಂದ್ ಮಾಡಲಾಗುತ್ತಿದೆ. ಭಾರತದಾದ್ಯಂತ ವಿವಿಧ ರಕ್ಷಣಾ ಪಡೆಗಳಲ್ಲಿರುವ ಸೈನಿಕರಿಗೆ ಶುದ್ಧ, ಆರೋಗ್ಯಕರ ಮತ್ತು ತಾಜಾ ಹಸುವಿನ ಹಾಲಿನ ಉತ್ಪಾದನೆ ಮತ್ತು ಪೂರೈಕೆಗಾಗಿ ಬ್ರಿಟಿಷ್ ಸೈನ್ಯ ಈ ಮಿಲಿಟರಿ ಫಾರ್ಮ್ಗಳನ್ನು ಆರಂಭಿಸಿತ್ತು. ಡೈರಿ ಕೃಷಿಯ ಉತ್ತೇಜನಕ್ಕೆ ಮಿಲಿಟರಿ ಫಾರ್ಮ್ಗಳು ದೊಡ್ಡ ಕೊಡುಗೆ ನೀಡಿವೆ, ದೇಶದ ಯಾರೂ ಪ್ರವೇಶಿಸಲಾಗದ ಪ್ರದೇಶಗಳಿಗೂ ಹಾಲು ಒದಗಿಸಲು ಸೈನ್ಯ ಸಹಾಯ ಮಾಡಿದೆ.

ಮಾಜಿ ಪ್ರಧಾನಿ ದೇವೇಗೌಡ-ಪತ್ನಿ ಚೆನ್ನಮ್ಮಗೆ ಕೊರೊನಾ ಸೋಂಕು

ಬೆAಗಳೂರು, ಮಾ. ೩೧: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಕುಟುಂಬದಿAದ ದೂರವಾಗಿ ಇಬ್ಬರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬAಧ ದೇವೇಗೌಡ ಅವರು ತಮ್ಮ ಟ್ವೀಟ್ ಮೂಲಕ ಮಾಹಿತಿ ತಿಳಿಸಿದ್ದಾರೆ. ನನ್ನ ಪತ್ನಿ ಚೆನ್ನಮ್ಮ ಮತ್ತು ನಾನು ಕೋವಿಡ್-೧೯ ಪಾಸಿಟಿವ್ ವರದಿ ಪಡೆದಿದ್ದೇವೆ. ನಾವು ಇತರ ಕುಟುಂಬ ಸದಸ್ಯರೊಂದಿಗೆ ಸ್ವಯಂ-ಪ್ರತ್ಯೇಕತೆಯಲ್ಲಿದ್ದೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಕಳೆದ ಕೆಲವು ದಿನಗಳಿಂದ ನಮ್ಮೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳು ಭಯಭೀತರಾಗಬೇಕಾದ ಅಗತ್ಯವಿಲ್ಲ ಎಂದು ನಾನು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದೂ ದೇವೇಗೌಡರು ಹೇಳಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರಿಗೆ ಕೊರೊನಾ ಸೋಂಕು ದೃಢವಾಗಿದ್ದು ಪ್ರಧಾನಿ ನರೇಂದ್ರ ಮೋದಿ ದೇವೇಗೌಡ ದಂಪತಿ ಆರೋಗ್ಯ ವಿಚಾರಿಸಿದ್ದಾರೆ. ದೇವೇಗೌಡ ಅವರೊಂದಿಗೆ ನಾನು ಮಾತನಾಡಿದ್ದು ಅವರ ಹಾಗೂ ಅವರ ಪತ್ನಿಯ ಆರೋಗ್ಯ ವಿಚಾರಿಸಿದ್ದೇನೆ. ಇಬ್ಬರೂ ಶೀಘ್ರದಲ್ಲಿ ಚೇತರಿಸಿಕೊಳ್ಳಲಿ ಎಂದು ಹಾರೈಸುವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ದೇವೇಗೌಡ ಸಹ ಟ್ವೀಟ್ ಮಾಡಿದ್ದು ನನ್ನ ಆರೋಗ್ಯದ ಕುರಿತು ವಿಚಾರಿಸಿದ ಪ್ರಧಾನಿ ಮೋದಿಯವರಿಗೆ ಕೃತಜ್ಞನಾಗಿದ್ದೇನೆ. ಯಾವುದೇ ನಗರದಲ್ಲಿ ನನ್ನ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ನಾನು ಚಿಕಿತ್ಸೆ ಪಡೆಯಬೇಕೆಂಬ ಅವರ ಪ್ರಸ್ತಾಪಕ್ಕೆ ನಾನು ಆಭಾರಿಯಾಗಿದ್ದೇನೆ. ಅಲ್ಲದೆ ಬೆಂಗಳೂರಿನಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ ಎಂದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ದೇವೇಗೌಡರ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.