ಮಡಿಕೇರಿ, ಮಾ. ೩೧: ಬಾಳುಗೋಡು ಶ್ರೀ ಕಂಡಿಮಕ್ಕಿ ಮೂರ್ತಿ ದೇವಸ್ಥಾನದ ವಾರ್ಷಿಕ ಉತ್ಸವ ಏಪ್ರಿಲ್ ೩, ೪ ಮತ್ತು ೫ ರಂದು ನಡೆಸಲಾಗುವುದು. ಕೊರೊನಾ ಹಿನ್ನೆಲೆ ಅಂತರ ಜಿಲ್ಲೆಯ ಭಕ್ತಾದಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ ದೇವಸ್ಥಾನದ ಆವರಣದಲ್ಲಿ ಅಂಗಡಿ ಮುಂಗಟ್ಟುಗಳು ತೆರೆಯುವುದನ್ನು ನಿರ್ಬಂಧಿಸಲಾಗಿದೆ.

ಆದುದರಿಂದ ಭಕ್ತಾದಿಗಳು ಸಹಕರಿಸುವಂತೆ ಹಾಗೂ ಮಾಸ್ಕ್ ಧರಿಸುವುದು, ಅಂತರ ಕಾಪಾಡುವಂತೆ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಪ್ರಕಟಣೆ ಕೋರಿದೆ.