*ಸಿದ್ದಾಪುರ, ಮಾ. ೩೧: ಮಾಲ್ದಾರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಡ್ಲೂರು ನಿವಾಸಿ, ಅಂಗನವಾಡಿ ಸಹಾಯಕಿ ಮಂಗಳ ಮಂಜು (೪೮) ಅವರ ಮೃತದೇಹ ಪಿರಿಯಾಪಟ್ಟಣ ತಾಲೂಕಿನ ಲಿಂಗಪುರ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಈ ಸಂಬAಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಿವಾಹಿತೆಯಾಗಿರುವ ಮಂಗಳ ತಂದೆ ತಾಯಿಯೊಂದಿಗೆ ಗುಡ್ಲೂರುವಿನಲ್ಲಿ ನೆಲೆಸಿದ್ದರು, ಸಾವಿಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.