ಸಿದ್ದಾಪುರ, ಮಾ. ೩೦: ಸನ್ನಿ ಯುವಜನ ಸಂಘ (ಎಸ್‌ವೈಎಸ್) ಜಿಲ್ಲಾ ಸಮಿತಿ ವತಿಯಿಂದ ಅಧ್ಯಯನ ಶಿಬಿರ ನೆಲ್ಲಿಹುದಿಕೇರಿಯ ಶಾದಿಮಹಲ್ ಸಭಾಂಗಣದಲ್ಲಿ ಕೋವಿಡ್ ನಿಯಮ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಶಿಬಿರ ನಡೆಯಿತು.

ಎಸ್‌ವೈಎಸ್ ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಸ್ಸಮದ್ ಪೂಕೋಟೂರ್ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಂತಿ ಸಹಬಾಳ್ವೆಯೊಂದಿಗೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಸುಂದರ ಸಮಾಜ ನಿರ್ಮಾಣ ಮಾಡಲು ಕೈಜೋಡಿಸುವ ಮೂಲಕ ಯುವ ಸಮೂಹವನ್ನು ಶಿಕ್ಷಣದೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರಬೇಕು. ಯುವಸಮೂಹ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸದೃಢರಾಗಬೇಕೆಂದು ಹೇಳಿದರು.

ಎಸ್‌ವೈಎಸ್ ರಾಜ್ಯ ಸಮಿತಿಯ ಪ್ರಮುಖ ಸಲಾಹುದ್ದೀನ್ ಫೈಝಿ ಮಾತನಾಡಿ, ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿ ಕೊಳ್ಳುವದರ ಮೂಲಕ ಸೌಹಾರ್ಧ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ.

ಸಮಾಜ ಸೇವೆಯೊಂದಿಗೆ ಪರಸ್ಪರ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಮಾತನಾಡಿದರು.

ಎಸ್‌ವೈಎಸ್ ಜಿಲ್ಲಾ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಪ ಖಾಝಿ ಎಂ.ಎA. ಅಬ್ದುಲ್ಲಾ ಫೈಝಿ, ಪ್ರಮುಖರಾದ ಎಂ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಉಮ್ಮರ್ ಫೈಝಿ, ಆರಿಫ್ ಫೈಝಿ, ತಮ್ಲಿಕ್ ದಾರಿಮಿ, ಅಬೂಬಕ್ಕರ್ ಮುಸ್ಲಿ ಯಾರ್, ಸುಲೈಮಾನ್ ಹಾಜಿ, ಉಸ್ಮಾನ್ ಫೈಝಿ, ಮುಸ್ತಫಾ ಹಾಜಿ, ರವೂಫ್ ಹಾಜಿ, ನಾಣಿ ಹಾಜಿ, ಸೂಫಿ ದಾರಿಮಿ, ರಫೀಕ್ ಖಾಜಿ, ಇಕ್ಬಾಲ್ ಮೌಲವಿ, ನೌಫಲ್ ಹುದವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.