ಕುಶಾಲನಗರ, ಮಾ.೩೦: ಡೆಹ್ರಾಡೂನ್ ಬಳಿ ಆತ್ಮಹತ್ಯೆಗೆ ಶರಣಾದ ಜಿಲ್ಲೆಯ ಕುಶಾಲನಗರದ ಯೋಧ ಪ್ರಜ್ವಲ್ ಅಂತ್ಯಕ್ರಿಯೆ ಉತ್ತರಾಖಂಡ್ ರಾಜ್ಯದ ಹೃಷಿಕೇಶ್ನಲ್ಲಿ ತಾ. ೩೧ರಂದು (ಇಂದು) ನಡೆಯಲಿದೆ.
ತಾ. ೨೭ ರಂದು ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಜ್ವಲ್ ಮೃತದೇಹ ಬಹುತೇಕ ಕೊಳೆತ ಸ್ಥಿತಿಯಲ್ಲಿ ಇರುವ ಕಾರಣ ಕುಶಾಲನಗರಕ್ಕೆ ತರಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಅಲ್ಲಿಯೇ ಅಂತ್ಯಸAಸ್ಕಾರ ಮಾಡಲು ಸೇನಾ ಅಧಿಕಾರಿಗಳು ನಿರ್ಧರಿಸಿದ್ದು ಕುಟುಂಬ ಸದಸ್ಯರಿಗೆ ಮಾಹಿತಿ ಒದಗಿಸಿದ್ದಾರೆ. ಯೋಧನ ಸಹೋದರ ಮತ್ತು ಸ್ನೇಹಿತರು ಈಗಾಗಲೇ ಹೃಷಿಕೇಶ್ ತಲಪಿದ್ದು, ಪತ್ನಿ ಮತ್ತು ಆಕೆಯ ಸಹೋದರ
ತಾ. ೩೦ರಂದು ಹೃಷಿಕೇಶ್ಗೆ ತೆರಳಿದ್ದಾರೆ. ಆತ್ಮಹತ್ಯೆಗೆ ಶರಣಾದ ಯೋಧ ಪ್ರಜ್ವಲ್ ಮರಣಕ್ಕೆ ಮುನ್ನ ಎರಡು ಡೆತ್ನೋಟ್ ಬರೆದಿರುವ ಬಗ್ಗೆ ಆತನ ಸ್ನೇಹಿತ ಮಣಿ ಎಂಬವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.