ಸಿದ್ದಾಪುರ, ಮಾ. ೩೦: ಜಿಲ್ಲೆಯ ಓಡಿಪಿ ಸಂಸ್ಥೆ ಹಾಗೂ ಕೂಡಿಗೆಯ ಕಾಫ್ಸೆಟ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡುವ ಬಗ್ಗೆ ೫ ದಿನಗಳ ತರಬೇತಿ ಕಾರ್ಯಕ್ರಮವು ನೆಲ್ಲಿಹುದಿಕೇರಿಯಲ್ಲಿ ಏರ್ಪಡಿಸಲಾಗಿತ್ತು.
ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಿದ್ದಾಪುರ, ಮಾ. ೩೦: ಜಿಲ್ಲೆಯ ಓಡಿಪಿ ಸಂಸ್ಥೆ ಹಾಗೂ ಕೂಡಿಗೆಯ ಕಾಫ್ಸೆಟ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡುವ ಬಗ್ಗೆ ೫ ದಿನಗಳ ತರಬೇತಿ ಕಾರ್ಯಕ್ರಮವು ನೆಲ್ಲಿಹುದಿಕೇರಿಯಲ್ಲಿ ಏರ್ಪಡಿಸಲಾಗಿತ್ತು.
ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಕಾಫ್ಸೆಟ್ ಸಂಸ್ಥೆಯ ಹಿರಿಯ ಬೋಧಕ ಸಲ್ಲಾಹುದ್ದೀನ್ ಅವರು ಮಹಿಳೆಯರಿಗೆ ಸ್ವಯಂ ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಾಪುರದ ಗ್ರಾ.ಪಂ. ಅಧ್ಯಕ್ಷೆ ತೀತಮಾಡ ರೀನಾ ತುಳಸಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಫ್ಸೆಟ್ ಪ್ರಮುಖರಾದ ಹರೀಶ್, ಓಡಿಪಿ ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನಜಸ್ ಇನ್ನಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.