ಸಂಪಾಜೆ, ಮಾ. ೩೦: ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಅಡಿಕೆಗೆ ಹಳದಿ ರೋಗ ವಿರುದ್ಧ ಹೋರಾಟ ಸಮಿತಿ ಸಭೆ ಸಂಪಾಜೆಯ ಯಶೋಧ ಮುತ್ತಯ್ಯ ಗೌಡ ಸಭಾಂಗಣದಲ್ಲಿ ಜರುಗಿತು.
ರಾಜಾರಾಮ್ ಕಳಗಿ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಕೇಂದ್ರ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಪ್ರತಿ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮತ್ತು ಮನೆಮನೆ ಜಾಗೃತಿಯಾಗಬೇಕು. ಗ್ರಾಮಸ್ಥರೊಂದಿಗೆ ಚರ್ಚಿಸಿ ಬೇಡಿಕೆಗಳ ಪಟ್ಟಿಗೆ ಅಭಿಪ್ರಾಯ ಸಂಗ್ರಹಿಸಬೇಕು. ಗ್ರಾಮ ತಾಲೂಕು ಮತ್ತು ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಲು ಗ್ರಾಮಸ್ಥರು ಕೈಜೋಡಿಸಬೇಕು. ಯಾವುದೇ ದೇಣಿಗೆ ಸಂಗ್ರಹ, ಆಡಂಬರದ ಸಮಾವೇಶ ನಮ್ಮ ಹೋರಾಟದ ಮಾದರಿಯಲ್ಲ ಎಂದರು.
ಪ್ರಮುಖರಾದ ವರದರಾಜ್ ಸಂಕೇಶ್ ಸ್ವಾಗತಿಸಿದರು. ಬನ್ನೂರು ಪಟ್ಟೆ ಪ್ರದೀಪ್ ಕುಮಾರ್ ಕರಿಕೆ ನಿರೂಪಿಸಿ, ವಂದಿಸಿದರು. ವೇದಿಕೆಯಲ್ಲಿ, ಗ್ರಾಮದ ವಿಶ್ವನಾಥ ಪೆಲ್ತಡ್ಕ ಸಮಿತಿ ಪ್ರಮುಖರಾದ ಉಮೇಶ್ ಕಜ್ಜೋಡಿ ಉಪಸ್ಥಿತರಿದ್ದರು. ಮಲೆನಾಡು ವೇದಿಕೆಯ ಪ್ರಮುಖರಾದ ಭಾನುಪ್ರಕಾಶ್ ಪೆರುಮುಂಡ, ಜಯರಾಮ ಕಟ್ಟೆಮನೆ, ಭರತ್ ಕನ್ನಡ್ಕ ಉಪಸ್ಥಿತರಿದ್ದರು.