ಸೋಮವಾರಪೇಟೆ, ಮಾ. ೩೦: ನಿನ್ನೆ ರಾತ್ರಿ ಜನವಸತಿ ಪ್ರದೇಶದಲ್ಲಿ ಸಂಚರಿಸಿರುವ ಕಾಡಾನೆಗಳು ಸಮೀಪದ ಗೋಣಿಮರೂರು ಸರ್ಕಾರಿ ಶಾಲೆಯ ಗೇಟ್ನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ. ಮರಿಯಾನೆಯನ್ನು ಒಳಗೊಂಡAತೆ ೨ ಕಾಡಾನೆಗಳು ಗೋಣಿಮರೂರಿನಲ್ಲಿ ರಾತ್ರಿ ಸಂಚರಿಸಿದ್ದು, ಈ ವ್ಯಾಪ್ತಿಯಲ್ಲಿ ಕೃಷಿ ಫಸಲನ್ನು ನಷ್ಟಗೊಳಿಸಿವೆ.
ನಿನ್ನೆ ರಾತ್ರಿ ಬಾಣಾವರ ಮೀಸಲು ಅರಣ್ಯದಿಂದ ಜನವಸತಿ ಪ್ರದೇಶಕ್ಕೆ ಆಗಮಿಸಿದ ಕಾಡಾನೆಗಳು, ಕೃಷಿ ಪ್ರದೇಶದಲ್ಲಿ ಮನಸೋಯಿಚ್ಛೆ ಸಂಚರಿಸಿ ಕ್ಯಾನೆಗೆಣಸು, ಬಾಳೆ ಕೃಷಿಯನ್ನು ನಷ್ಟಗೊಳಿಸಿವೆ. ಇಂದು ನಸುಕಿನ ೩ ಗಂಟೆ ಸುಮಾರಿಗೆ ಕಾಡಾನೆಗಳನ್ನು ನೋಡಿದ ಸ್ಥಳೀಯರು ಬೊಬ್ಬೆ ಹಾಕಿದ ಸಂದರ್ಭ ದಾರಿ ಕಾಣದೇ ರಾಜ್ಯ ಹೆದ್ದಾರಿ ಮಾರ್ಗವಾಗಿ ಸರ್ಕಾರಿ
(ಮೊದಲ ಪುಟದಿಂದ) ಮಾದರಿ ಪ್ರಾಥಮಿಕ ಶಾಲೆಯತ್ತ ನುಗ್ಗಿವೆ.
ಶಾಲೆಗೆ ಅಳವಡಿಸಿದ್ದ ಕಬ್ಬಿಣದ ಗೇಟ್ ಹಾಗೂ ಕಾಂಪೌAಡ್ನ್ನು ಧ್ವಂಸಗೊಳಿಸಿ ಸರ್ಕಾರಿ ಪ್ರೌಢಶಾಲೆಯ ಬೇಲಿಗಳನ್ನು ಕಿತ್ತೆಸೆದು ಅರಣ್ಯಕ್ಕೆ ತೆರಳಿವೆ. ಗೋಣಿಮರೂರು ಗ್ರಾಮದ ಮಂಜಣ್ಣ ಅವರು ತಮ್ಮ ತೋಟದಲ್ಲಿ ನಿರ್ಮಿಸಿದ್ದ ನೀರಿನ ಟ್ಯಾಂಕ್ ನಾಶಗೊಂಡಿದ್ದು, ಕಾಫಿ ಗಿಡಗಳಿಗೂ ಹಾನಿಯಾಗಿವೆ.
ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿ, ಅವುಗಳು ವಾಪಸ್ ಜನವಸತಿ ಪ್ರದೇಶದತ್ತ ಬಾರದಂತೆ ಯೋಜನೆ ರೂಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.