ಮಡಿಕೇರಿ, ಮಾ. ೩೦: ಪ್ರಸ್ತುತ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಹಗರಣದ ಕುರಿತಾದ ತನಿಖಾ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಎ.ಸಿ.ಪಿ.ಯಾಗಿರುವ ಕೊಡಗಿನವರಾದ ಅಂಜಪರವAಡ ಕವಿತಾ ಅವರು ನೇಮಕವಾಗಿದ್ದಾರೆ. ಬೆಂಗಳೂರಿನ ಕಬ್ಬನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಕುರಿತು ಅಲ್ಲಿನ ಎಸ್.ಐ.ಟಿ. (ಸ್ಪೆಷಲ್ ಇನ್‌ವೆಸ್ಟಿಗೇಷನ್ ಟೀಂ)ನ ತನಿಖಾಧಿಕಾರಿಯಾಗಿ ಕವಿತಾ ಅವರನ್ನು ನಿಯುಕ್ತಿ ಮಾಡಲಾಗಿದೆ.

ಈ ಹಿಂದೆ ಕಬ್ಬನ್‌ಪೇಟೆ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಕವಿತಾ ಪ್ರಸ್ತುತ ಬೆಂಗಳೂರು ಪೂರ್ವ ವಿಭಾಗದ ಎ.ಸಿ.ಪಿ.ಯಾಗಿದ್ದಾರೆ. ಇದೀಗ ಕಬ್ಬನ್‌ಪೇಟೆ ಠಾಣೆಯಲ್ಲಿನ ಪ್ರಕರಣದ ತನಿಖಾಧಿಕಾರಿಯಾಗಿ ಇವರು ಕೆಲಸ ನಿರ್ವಹಿಸಲಿದ್ದಾರೆ.