ಸಿದ್ದಾಪುರ, ಮಾ. ೩೦: ಬೆಂಗಳೂರಿನ ಬಿಎಸ್‌ಎಸ್ ಮೈಕ್ರೊ ಫೈನಾನ್ಸ್ ಲಿಮಿಟೆಡ್ ಇವರ ವತಿಯಿಂದ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕಲಿಕೆಗಾಗಿ, ಮೂರು ಲಕ್ಷ ರೂಪಾಯಿ ವೆಚ್ಚದ ಟೇಬಲ್, ಮೇಜುಗಳನ್ನು ಉಚಿತವಾಗಿ ವಿತರಿಸಿದರು.

ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷ ಶಾಂತಕುಮಾರ್, ಶಾಲಾ ಮುಖ್ಯ ಶಿಕ್ಷಕ ಕುಮಾರ್, ಬಿಎಸ್‌ಎಸ್ ಸಂಸ್ಥೆಯ ಮೇಲ್ವಿಚಾರಕರು, ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಸದಸ್ಯರುಗಳಾದ ಮನುಮಹೇಶ್, ಗಣೇಶ್, ಸರಸ್ವತಿ, ಗ್ರಾಮಸ್ಥರಾದ ಶಿವಕುಮಾರ್, ಶಾಂತಕುಮಾರ್ ಇನ್ನಿತರರು ಹಾಜರಿದ್ದರು.