ಮಡಿಕೇರಿ, ಮಾ. ೩೦: ಅಪಘಾತ, ಹಲ್ಲೆ, ಕಳ್ಳತನ, ಸಂಚಾರಿ ಅಪರಾಧ ಸೇರಿದಂತೆ ಇತರ ಘಟನೆಗಳು ಕಂಡುಬAದಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದು ದೂರು ನೀಡುವ ಬದಲು, ತಮ್ಮ ಮೊಬೈಲ್ ಫೋನ್ ಮೂಲಕವೇ ಘಟನೆಯನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತರಬಹುದಾಗಿದೆ. ರಾಜ್ಯ ಸರಕಾರದ ವತಿಯಿಂದ ೨೦೧೮ ರಲ್ಲಿ ಸಾರ್ವಜನಿಕರ ಬಳಕೆಗೆ ‘ಕರ್ನಾಟಕ ಸ್ಟೇಟ್ ಪೊಲೀಸ್’ ಮೊಬೈಲ್ ಆ್ಯಪ್‌ಗೆ ಚಾಲನೆ ದೊರೆತಿದ್ದು, ಇದರ ಸದುಪಯೋಗಪಡಿಸಿಕೊಳ್ಳಲು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಮನವಿ ಮಾಡಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆದಲ್ಲಿ, ಆ್ಯಪ್‌ನಲ್ಲಿ ‘ರಿಪೋರ್ಟ್ ಇನ್ಸಿಡೆಂಟ್’ ಆಯ್ಕೆಯ ಮೂಲಕ ಸಾರ್ವಜನಿಕರು ಪೊಲೀಸ್ ಇಲಾಖೆಯ ಗಮನಕ್ಕೆ ತರಬಹು ದಾಗಿದೆ. ಘಟನೆ ಎಲ್ಲಿ ನಡೆದಿದ್ದು, ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯ ವಿವರ, ಈ ಎಲ್ಲವನ್ನೂ ಆ್ಯಪ್ ಮೂಲಕ ನೀಡಬಹುದಾಗಿದೆ. ಘಟನೆಯ ಚಿತ್ರವಿದ್ದಲ್ಲಿ ಅದನ್ನೂ ಅಪ್‌ಲೋಡ್ ಮಾಡಬಹುದಾಗಿದೆ.

ದಾಖಲಾತಿಗಳು ಕಳೆದುಕೊಂಡರೂ ದೂರು ನೀಡಬಹುದು

ಸಾರ್ವಜನಿಕರು ತಮ್ಮ ಪ್ರಮುಖ ದಾಖಲಾತಿಗಳನ್ನು ಕಳೆದುಕೊಂಡಲ್ಲಿ, ದೂರು ನೀಡಲು ಪೊಲೀಸ್ ಠಾಣೆಗೆ ತೆರಳಬೇಕಾಗಿಲ್ಲ. ಕರ್ನಾಟಕ ಸ್ಟೇಟ್ ಪೊಲೀಸ್ ಮೊಬೈಲ್ ಆ್ಯಪ್ ಮೂಲಕ ‘ಇ- ಲಾಸ್ಟ್ ರಿಪೋರ್ಟ್’ ಆಯ್ಕೆಯನ್ನು ಬಳಸಿಕೊಂಡು ಸಾರ್ವಜನಿಕರು ದೂರು ದಾಖಲಿಸಬಹುದಾಗಿದೆ.

ಈ ಆ್ಯಪ್‌ನಲ್ಲಿನ ‘ಇ-ಲಾಸ್ಟ್ ರಿಪೋರ್ಟ್’ ಆಯ್ಕೆಯ ಮೂಲಕ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ವಾಹನ ಪರವಾನಗಿ, ಚೆಕ್/ಡಿ.ಡಿ, ಗುರುತಿನ ಚೀಟಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಟ್ಯಾಬ್‌ಲೆಟ್/ಐ-ಪ್ಯಾಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, ವಿಡಿಯೋ ಕ್ಯಾಮರಾ, ಶಿಕ್ಷಣಕ್ಕೆ ಸಂಬAಧಿಸಿದ ದಾಖಲಾತಿಗಳು, ಮತದಾರರ ಚೀಟಿ ಕಳೆದುಕೊಂಡ ಸಾರ್ವಜನಿಕರು ದೂರು ಸಲ್ಲಿಸಬಹುದು