ಸೋಮವಾರಪೇಟೆ, ಮಾ. ೩೦: ದಿನದಿಂದ ದಿನಕ್ಕೆ ಕಾವೇರುತ್ತಿರುವ ಪ್ರತಿಷ್ಠಿತ ಒಕ್ಕಲಿಗರ ಸಂಘದ ಚುನಾವಣೆಗೆ ಸಂಬAಧಿಸಿದAತೆ ಕೊಡಗಿನಿಂದ ಒಮ್ಮತದ ಅಭ್ಯರ್ಥಿಯ ಆಯ್ಕೆಯ ಹೊಣೆಯನ್ನು ತಾಲೂಕು ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ಹೊರಬೇಕೆಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅಭಿಪ್ರಾಯಗಳು ಕೇಳಿಬಂದವು.

ತಾಲೂಕು ಪಂಚಾಯಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರ ನೇತೃತ್ವದಲ್ಲಿ ನಡೆದ ಒಕ್ಕಲಿಗ ಸಮುದಾಯದವರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಈಗಾಗಲೇ ಸಿದ್ಧತೆಗಳು ಆರಂಭಗೊAಡಿದ್ದು, ಹರಪಳ್ಳಿ ರವೀಂದ್ರ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಸಭೆಗಳಲ್ಲಿ ಭಾಗವಹಿಸುವ ಮಂದಿ ಒಮ್ಮತದ ಅಭ್ಯರ್ಥಿ ಆಯ್ಕೆಯಾಗಬೇಕು. ಹೊರ ಜಿಲ್ಲೆಯವರನ್ನು ಹೊರತುಪಡಿಸಿ ಕೊಡಗಿನಿಂದಲೇ ನಿರ್ದೇಶಕರನ್ನು ಆರಿಸಿ ಕಳುಹಿಸಬೇಕು ಎಂದು ಅಭಿಪ್ರಾಯ ಹೊರಹಾಕುತ್ತಿರುವ ಬೆನ್ನಲ್ಲೇ ಇಂದು ನಡೆದ ಸಭೆ ಮಹತ್ವ ಪಡೆದಿತ್ತು.

ಒಕ್ಕಲಿಗ ಸಮುದಾಯದ ಕೆ.ಎಂ. ಲೋಕೇಶ್, ಹೆಚ್.ಆರ್. ಸುರೇಶ್, ಬಿ.ಬಿ. ಸತೀಶ್ ಸೇರಿದಂತೆ ಐದಾರು ಮಂದಿ ಮುಖಂಡರು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸಮುದಾಯದ ಮುಖಂಡರು, ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಜಿಲ್ಲಾ ಹಾಗೂ ತಾಲೂಕು ಸಂಘದ ನಿರ್ದೇಶಕರೇ ಸಭೆ ಕರೆದು ಆಯ್ಕೆ ಮಾಡಲಿ. ಅಲ್ಲಿಯೂ ಒಮ್ಮತ ಮೂಡದಿದ್ದಲ್ಲಿ ಚುನಾವಣೆ ನಡೆಯಲಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಕೆ.ಎಂ. ಲೋಕೇಶ್, ಒಕ್ಕಲಿಗರ ಸಂಘದ ಚುನಾವಣೆಗೆ ಸಂಬAಧಿಸಿದAತೆ ಜಿಲ್ಲಾ ಒಕ್ಕಲಿಗರ ಸಂಘ ಯಾವದೇ ಮಾತುಕತೆ ನಡೆಸಿಲ್ಲ. ಆಕಾಂಕ್ಷಿಗಳನ್ನು ಕರೆದು ಸಭೆ ನಡೆಸಿಲ್ಲ. ತಾಲೂಕು ಒಕ್ಕಲಿಗರ ಸಂಘವೂ ಈ ಬಗ್ಗೆ ಗಮನಹರಿಸಿಲ್ಲ. ನಾನೂ ಸೇರಿದಂತೆ ಇತರರು ಆಕಾಂಕ್ಷಿಗಳಾಗಿದ್ದು, ತಕ್ಷಣ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಿ ಎಂದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರು ಚುನಾವಣೆ ಸಂಬAಧ ಯಾವುದೇ ಚರ್ಚೆ ನಡೆಸಿಲ್ಲ. ಆದರೂ ಹರಪಳ್ಳಿ ರವೀಂದ್ರ ಅವರಿಗೆ ವೈಯಕ್ತಿಕ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಇದು ಸರಿಯಲ್ಲ. ಒಕ್ಕಲಿಗರ ಸಂಘ ಕೇವಲ ಕಟ್ಟಡ ಕಟ್ಟುವುದು, ಮದುವೆ ಸಮಾರಂಭ ನಡೆಸಿದರಷ್ಟೇ ಸಾಲದು. ಇದರೊಂದಿಗೆ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.

ಹೆಚ್.ಆರ್. ಸುರೇಶ್ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘದ ಸೌಲಭ್ಯಗಳನ್ನು ಪ್ರತಿ ಯೋರ್ವರಿಗೂ ತಲುಪಿಸು ವಂತಾಗಬೇಕು. ಜಿಲ್ಲೆಯಿಂದ ಉತ್ತಮ ನಿರ್ದೇಶಕರನ್ನು ಆಯ್ಕೆ ಮಾಡಬೇಕು. ಮತದಾರರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಅAತಿಮವಾಗಿ ಒಮ್ಮತದ ಅಭ್ಯರ್ಥಿಯ ಆಯ್ಕೆಯ ಹೊಣೆಯನ್ನು ಜಿಲ್ಲೆ ಹಾಗೂ ತಾಲೂಕು ಸಂಘ ವಹಿಸಿಕೊಂಡು, ನಿರ್ದೇಶಕರ ಸಭೆ ಕರೆದು ಚರ್ಚಿಸಬೇಕು. ನಂತರ ಆಕಾಂಕ್ಷಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಒಮ್ಮತ ಮೂಡದಿದ್ದರೆ ಚುನಾವಣೆ ನಡೆಯಲಿ ಎಂದು ಸಭೆಯಲ್ಲಿದ್ದವರು ಅಭಿಪ್ರಾಯಿಸಿದರು.

ಸಭೆಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ. ಮಿಥುನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಭರತ್‌ಕುಮಾರ್, ಜಿ.ಪಂ. ಮಾಜೀ ಸದಸ್ಯ ಸಂಜಯ್ ಜೀವಿಜಯ, ಶಾಂತಳ್ಳಿ ಗ್ರಾ.ಪಂ. ಮಾಜೀ ಅಧ್ಯಕ್ಷ ಬಗ್ಗನ ಅನಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.