ಮೂರ್ನಾಡು, ಮಾ. ೨೯: ಮೂರ್ನಾಡಿನಲ್ಲಿ ಇತ್ತೀಚೆಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಮಡಿಕೇರಿ ತಾಲೂಕು ಕ.ಸಾ.ಪ. ಮತ್ತು ಮೂರ್ನಾಡು ಹೋಬಳಿ ಕ.ಸಾ.ಪ. ಸಹಯೋಗದಲ್ಲಿ ಜರುಗಿದ ದಾಸಸಾಹಿತ್ಯ ಸಮಾವೇಶದ ಲೆಕ್ಕಪತ್ರ ಮಂಡನೆ ಹಾಗೂ ಧನ್ಯವಾದ ಸಮರ್ಪಣಾ ಕಾರ್ಯಕ್ರಮ ಮೂರ್ನಾಡಿನ ಸಮುದಾಯ ಭವನದಲ್ಲಿ ಜರುಗಿತು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಐದು ವರ್ಷಗಳಲ್ಲಿ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು, ಸಮ್ಮೇಳನಗಳನ್ನು, ಸಮಾವೇಶಗಳನ್ನು ಹಮ್ಮಿಕೊಂಡಿರುವAತೆ ಪ್ರಸ್ತುತ ಮೂರ್ನಾಡಿನಲ್ಲಿ ದಾಸ ಸಾಹಿತ್ಯ ಸಮಾವೇಶ ಏರ್ಪಡಿಸಿ ಸರ್ವರ ಸಹಕಾರದಿಂದ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ.

ಈ ಕಾರ್ಯಕ್ರಮದ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧ್ವಾಂಸರಾದ ಆನೂರು ಅನಂತ ಕೃಷ್ಣ ಶರ್ಮ ಹಾಗೂ ಶಂಕರ್ ಶಾನಭೋಗ್ ಅವರು ಅರಿಶಿಣ ಕುಂಕುಮಗಳAತೆ ಕಾರ್ಯಕ್ರಮಕ್ಕೆ ಮೆರುಗನ್ನು ತಂದಿತ್ತರು. ಇಂತಹ ಕಾರ್ಯಕ್ರಮಗಳ ಮೂಲಕ ಕೊಡಗು ಜಿಲ್ಲಾ ಕ.ಸಾ. ಪರಿಷತ್ತು ರಾಜ್ಯ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿರುವುದು ಮಾತ್ರವಲ್ಲದೇ ಕಾರ್ಯಕ್ರಮಗಳನ್ನೂ ವೈವಿಧ್ಯಮಯವಾಗಿ ಸಂಘಟಿಸಬಹು ದೆಂಬದನ್ನು ಸಾಧಿಸಿ ತೋರಿಸಿ ಇತರ ಜಿಲ್ಲೆಗಳ ಪರಿಷತ್ತುಗಳಿಗೆ ಮಾದರಿ ಯಾಗಿದೆ. ದಾಸ ಸಾಹಿತ್ಯ ಸಮಾ ವೇಶದ ಯಶಸ್ಸಿಗೆ ಕಾರಣಕರ್ತರಾದ ಕ.ಸಾ.ಪ.ದ ಎಲ್ಲಾ ಸದಸ್ಯರಿಗೂ ಹಾಗೂ ಕನ್ನಡ ಅಭಿಮಾನಿ ಜನತೆಗೂ ಧನ್ಯವಾದ ಸಮರ್ಪಿಸುತ್ತಿರುವುದಾಗಿ ತಿಳಿಸಿದರು.

ಮೂರ್ನಾಡು ಹೋಬಳಿ ಕ.ಸಾ.ಪ. ಅಧ್ಯಕ್ಷ ಪಿ.ಪಿ ಸುಕುಮಾರ್ ಲೆಕ್ಕಪತ್ರಗಳನ್ನು ಮಂಡಿಸಿದರು. ಹೋಬಳಿ ಗೌರವ ಕಾರ್ಯದರ್ಶಿ ಪಿ.ಎಸ್. ರವಿಕೃಷ್ಣ ಸಮ್ಮೇಳನದ ಯಶಸ್ಸಿಗೆ ಸಹಯೋಗವನ್ನು ನೀಡಿದ ಎಲ್ಲಾ ಸಮಿತಿಗಳಿಗೂ, ಸಂಘ-ಸAಸ್ಥೆಗಳಿಗೂ, ಸದಸ್ಯರಿಗೂ ಹಾಗೂ ಜನತೆಗೆ ಕೃತಜ್ಞತೆಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಡಾ. ಮೇಚೀರ ಸುಭಾಷ್ ನಾಣಯ್ಯ, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಕುಡೆಕಲ್ ಸಂತೋಷ್, ಕ.ಸಾ.ಪ. ಹಿರಿಯ ಸದಸ್ಯರಾದ ಛಾಯಾಗ್ರಾಹಕ ವಿಘ್ನೇಶ್ ಹಾಗೂ ಪುದಿಯೊಕ್ಕಡ ರಮೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೂರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಚಂದ್ರಶೇಖರ್, ಉಪಾಧ್ಯಕ್ಷೆ ವಿಜಯಲಕ್ಷಿö್ಮ, ಹಿರಿಯ ಕವಿ ಕಿಗ್ಗಾಲು ಗಿರೀಶ್, ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಉಪ ಸಮಿತಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.