ಕೊಡ್ಲಿಪೇಟೆ, ಮಾ. ೨೯ : ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದಲ್ಲಿ ಉಚಿತ ಓಜೋನ್ ಚಿಕಿತ್ಸಾ ಶಿಬಿರ ನಡೆಯಿತು. ದಾವಣೆಗೆರೆಯ ಓಜೋನ್ ತೆರಪಿಸ್ಟ್ ವ್ಯೆದ್ಯ ಡಾ. ಗುರುದೇವ್ ಅವರು ಕಾಲುನೋವು, ಕೀಲು ನೋವಿಗೆ ಚಿಕಿತ್ಸೆ ನೀಡಿದರು.
ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದ ಮೂಲ ಗುರುಗಳ ಆರಾಧನೆ ಮತ್ತು ಶ್ರೀ ಚೌಡೇಶ್ವರಿದೇವಿಯ ಮಹಾಪೂಜೆಯ ಭಾಗವಾಗಿ ಭಕ್ತಾದಿಗಳಿಗೆ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು. ಉಚಿತ ಆರೋಗ್ಯ ಶಿಬಿರಕ್ಕೆ ಕೊಡ್ಲಿಪೇಟೆ ವೀರಶೈವ ಮಂಡಳಿಯ ಅಧ್ಯಕ್ಷ ಬಿ.ಕೆ. ಯತೀಶ್ ಕುಮಾರ್ ಅವರು ಸಹಭಾಗಿತ್ವ ನೀಡಿದರು.