ನಾಪೋಕ್ಲು, ಮ. ೨೯: ಹಣಕಾಸು ವಿಚಾರವಾಗಿ ವ್ಯಕ್ತಿಯೋರ್ವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಪಿರಿಯಾಪಟ್ಟಣದ ಹೊರವಲಯ ಚೌಡೇನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಜಿಲ್ಲೆಯ ನಾಪೋಕ್ಲು ಬಳಿಯ ಕೊಟ್ಟಮುಡಿ ಗ್ರಾಮದ ಮರ್ಕಝುಲ್ ಹಿದಾಯ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ಕೆ.ಎ. ಹ್ಯಾರಿಸ್ (೬೦) ಕೊಲೆಯಾದ ದುರ್ದೈವಿ. ಈ ಮೊದಲು ಕೆ.ಎ. ಹ್ಯಾರಿಸ್ ಬಳಿ ಕೆಲಸಕ್ಕಿದ್ದ ಮೂರ್ನಾಡು ಗ್ರಾಮದ ಹಮೀದ್ ಕೊಲೆ ಮಾಡಿದ ಆರೋಪಿ ಯಾಗಿದ್ದಾನೆ.ಕಳೆದ ೧೫-೨೦ ವರ್ಷದಿಂದ ಅಡಿಕೆ ವ್ಯಾಪಾರ ನಡೆಸುತ್ತಿದ್ದ ಹ್ಯಾರಿಸ್ ಬಳಿ ಅಡಿಕೆ ವ್ಯಾಪಾರದಲ್ಲಿ ಕೆಲಸ ಮಾಡುತ್ತಿದ್ದ ಹಮೀದ್ ನಂತರದ ದಿನಗಳಲ್ಲಿ ಸ್ವಂತ ವ್ಯಾಪಾರ ಶುರುಮಾಡಿದ್ದ. ವ್ಯಾಪಾರಕ್ಕೆ ಹ್ಯಾರಿಸ್ ಹಣದ ನೆರವು ನೀಡಿದ್ದರು.ಪಿರಿಯಾಪಟ್ಟಣದ ಹೊರ ವಲಯದ ಚೌಡೇನಹಳ್ಳಿ ಬಳಿ ಪಾಲುದಾರಿಕೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದ ಸಂದರ್ಭ ಲೆಕ್ಕ ಪರಿಶೋಧನೆ ವೇಳೆ ರೂ. ೧೮ ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿದ್ದ ಹಮೀದ್ ನ್ಯಾಯ ಪಂಚಾಯಿತಿ ಮೂಲಕ ೧೧ ಲಕ್ಷ ಕೊಡುವುದಾಗಿ ಒಪ್ಪಿಕೊಂಡಿದ್ದ. ನಂತರದಲ್ಲಿ ೫ ಲಕ್ಷ ಹಣ ನೀಡಿ ಉಳಿಕೆ ೬ ಲಕ್ಷ ಹಣವನ್ನು ಸೋಮವಾರ ಬೆಳಿಗ್ಗೆ ನೀಡುವುದಾಗಿ ಹ್ಯಾರಿಸ್‌ಗೆ ಕರೆ ಮಾಡಿ ಪಿರಿಯಾಪಟ್ಟಣದ ಚೌಡೇನಹಳ್ಳಿ ಬಳಿ ಬರ ಹೇಳಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿ ದ್ದಾನೆ. ಕತ್ತಿಯಿಂದ ಪ್ರಹರಿಸಿದ ಪರಿಣಾಮ ಹ್ಯಾರಿಸ್‌ನ ತಲೆ, ಕುತ್ತಿಗೆ ಭಾಗಕ್ಕೆ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹ್ಯಾರಿಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೊಲೆ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕೊಟ್ಟಮುಡಿಯಿಂದ ಹ್ಯಾರಿಸ್ ಅವರ ಸಂಬAಧಿಕರು, ಸ್ನೇಹಿತರು ತೆರಳಿದ್ದಾರೆ. ಘಟನಾ ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಹಾಗೂ ಬಿ.ಆರ್. ಪ್ರದೀಪ್ ಸಿಬ್ಬಂದಿಯೊಡನೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಯ ಆಸ್ಪತ್ರೆಗೆ ರವಾನಿಸಿ ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪಿರಿಯಾ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಮೀದ್ ನನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅAಗಡಿ-ಮುAಗಟ್ಟು ಬಂದ್

ಹತ್ಯೆಗೀಡಾದ ಹ್ಯಾರಿಸ್ ಉದ್ಯಮಿಯಾಗಿದ್ದು,

(ಮೊದಲ ಪುಟದಿಂದ) ಗ್ರಾಮದಲ್ಲಿ ಎಲ್ಲರೊಂದಿಗೂ ಅನ್ಯೋನ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಕೊಟ್ಟಮುಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಸ್ಥರು, ಸ್ನೇಹಿತರು, ಗ್ರಾಮಸ್ಥರು ನೆರೆದಿದ್ದರು. ಮೃತರ ಗೌರವಾರ್ಥ ಕೊಟ್ಟಮುಡಿಯಲ್ಲಿ ಅಂಗಡಿ-ಮುAಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚಿಸಲಾಯಿತು

.