ಕೂಡಿಗೆ, ಮಾ. ೨೯: ಶಿರಂಗಾಲ ಗ್ರಾಮ ದೇವತಾ ಸಮಿತಿಯ ವತಿಯಿಂದ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಬೆಳಿಗ್ಗೆ ೮ ಗಂಟೆಗೆ ಶ್ರೀ ಉಮಾಮಹೇಶ್ವರ ಸ್ವಾಮಿಗೆ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ, ಹೋಮ ಹವನದ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ನಂತರ ಹೂವಿನಿಂದ ಅಲಂಕೃತವಾದ ಭವ್ಯ ರಥದಲ್ಲಿ ಸ್ವಾಮಿಯ ಮೂರ್ತಿಯನ್ನಿಟ್ಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ರಥೋತ್ಸವದಲ್ಲಿ ರಥದ ಎದುರು ಉದ್ದೂರು ಹೊಸಹಳ್ಳಿ ರವಿ ತಂಡದಿAದ ವೀರಗಾಸೆ, ಮಂಗಳವಾದ್ಯವಿತ್ತು. ರಥ ಸಾಗುವ ದಾರಿ ಉದ್ದಕ್ಕೂ ಸ್ಥಳೀಯರು ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾಧಿಗಳಿಗೆ ಪಾನಕ ಮತ್ತು ಮಜ್ಜಿಗೆಯನ್ನು ನೀಡುತ್ತಿದ್ದುದು ಕಂಡುಬAತು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ಎಸ್.ಎಸ್. ಮಹೇಶ್, ಗಣೇಶ್, ಧನೇಂದ್ರಕುಮಾರ್ ಸೇರಿದಂತೆ ಸಮಿತಿಯ ಸದಸ್ಯರು ಇದ್ದರು.

ಭಕ್ತಾಧಿಗಳಿಗೆ ಬೆಂಗಳೂರಿನ ಚಂದ್ರಿಕಾ ಡಿ.ಆರ್. ಕೃಷ್ಣ ಶೆಟ್ಟಿ ಮತ್ತು ಕುಟುಂಬದವರಿAದ ಅನ್ನದಾನ ಏರ್ಪಡಿಸಲಾಗಿತ್ತು.