ಮಡಿಕೇರಿ, ಮಾ. ೨೯: ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ ೧೦ ತಿಂಗಳ ತೋಟಗಾರಿಕೆ ತರಬೇತಿಯು ೨೦೨೧ರ ಮೇ ೩ ರಿಂದ ೨೦೨೨ರ ಫೆಬ್ರವರಿ ೨೮ರ ವರೆಗೆ ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆಯಲಿದ್ದು, ಈ ಸಂಬAಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ೨೦೨೧ರ ಏಪ್ರಿಲ್, ೧೭ ಕೊನೆಯ ದಿನವಾಗಿದೆ. ಅರ್ಜಿಯನ್ನು ಕಚೇರಿಯಿಂದ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಕಚೇರಿಯನ್ನು ಬೆಳಗ್ಗೆ ೧೦ ಗಂಟೆಯಿAದ ಸಂಜೆ ೫.೩೦ ರೊಳಗೆ ಸಂಪರ್ಕಿಸಬಹುದು. ಅಥವಾ ದೂ.ಸಂ.೮೩೧೦೬೮೭೭೦೭, ೦೮೨೭೪-೨೨೩೪೦೨ ಅಥವಾ ಅಂತರ್ಜಾಲ ತಿತಿತಿ.hoಡಿಣiಛಿuಟಣuಡಿe.ಞಚಿಡಿ.ಟಿiಛಿ.iಟಿ ಇಲ್ಲಿ ಪಡೆಯಬಹುದು. ಮೂಲ ಅಗತ್ಯ ದಾಖಲಾತಿಗಳೊಂದಿಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಛಾಪಾಕಾಗದ, ತಂದೆ/ತಾಯಿ/ ಪೋಷಕರ ಹೆಸರಿನಲ್ಲಿರುವ ಜಮೀನಿನ ಆರ್‌ಟಿಸಿ (ಖಖಿಅ), ಜಾತಿ ಪ್ರಮಾಣ ಪತ್ರ, ಫೋಟೋ, ತಂದೆ /ತಾಯಿಯವರ ಒಪ್ಪಿಗೆ ಪತ್ರ ಇತ್ಯಾದಿ) ಅರ್ಹ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸುವಂತೆ ರಾಜ್ಯ ವಲಯ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.