ಮಡಿಕೇರಿ, ಮಾ. ೨೭: ‘ತಿರಿಬೊಳ್‌ಚ ಕೊಡವ ಸಂಘ’ದ ಆಶ್ರಯದಲ್ಲಿ ತಾ. ೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿ ಕೊಡವ ಸಮಾಜದಲ್ಲಿ... ಕೊಡವ ಮದುವೆಯಲ್ಲಿ ‘ಮೂಡಿ ನೀರೆಡ್‌ಪೊ' (ಚಾಣ ನೀರ್ ಕೈಪೊ) ಪದ್ಧತಿಯ ಇಂದಿನ ಕೆಲವಾರು ನ್ಯೂನತೆಗಳ ಕುರಿತು ಕೊಡವ ಮುಖಂಡರ ವಿಶೇಷ ವಿಚಾರಗೋಷ್ಠಿ... ಸಭೆಯೊಂದನ್ನು ಏರ್ಪಡಿಸಲಾಗಿದೆ.

ಕೊಡವ ಸಂಸ್ಕೃತಿಯ ಬಹುಮುಖ್ಯ ಭಾಗವಾಗಿರುವ ಮಂಗಲ ಪದ್ಧತಿಯಲ್ಲಿ ‘ಮೂಡಿ ನೀರೆಡ್‌ಪೊ’ ಶಾಸ್ತçದಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ, ಮೂಲಪದ್ಧತಿಗೆ ಸೇರಿರದ ಕೆಲವಾರು ನೂತನ ಸೇರ್ಪಡೆಯ ಸಂಬAಧದ ಸಾಮೂಹಿಕ ವಿಚಾರಗೋಷ್ಠಿ ಇದಾಗಿದೆ.

ಈ ವಿಚಾರದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ತಿರಿಬೊಳ್‌ಚ ಕೊಡವ ಸಂಘ’ವು ಕಳೆದ ಮೂರು ವರ್ಷಗಳಿಂದ ಕೊಡಗು, ಮೈಸೂರು, ಬೆಂಗಳೂರ್‌ನAತಹ ಕೇಂದ್ರಗಳಲ್ಲಿ ಕೊಡವ ಸಭೆ, ಕೊಡವ ಜಾಗೃತಿ ಕಾರ್ಯಕ್ರಮ, ಕೊಡವ ಮೋಪ್‌ಕೂಟ ಏರ್ಪಡಿಸಿ ಜನಾಭಿಪ್ರಾಯವನ್ನು ರೂಪಿಸಿದೆ. ಈ ಜನಾಭಿಪ್ರಾಯದ ಆಧಾರದಲ್ಲಿ ‘ಮೂಡಿ ನೀರೆಡ್‌ಪೊ' ‘ಗಂಗಾಪೂಜೆ’ ಎಂಬ ಶಾಸ್ತçವನ್ನು ‘ಚಾಣ ನೀರ್ ಕೈಪೊ’ ಎಂಬ ಮೂಲ ಪದ್ದತಿಗೊಪ್ಪುವ ರೀತಿಯಲ್ಲಿ ಸುಧಾರಿತ ಕ್ರಮವಾಗಿ ರೂಪಿಸುವ ನಿಟ್ಟನಲ್ಲಿ ಈ ಪ್ರಮುಖವಾದ ಕೊಡವ ಸಭೆಯನ್ನು ಏರ್ಪಡಿಲಾಗಿದೆ. ಈ ಹಿನ್ನೆಲೆಯಲ್ಲಿ ಅಖಿಲ ಕೊಡವ ಸಮಾಜ, ಕೊಡವ ಸಮಾಜ ಒಕ್ಕೂಟ, ಎಲ್ಲಾ ಕೊಡವ ಸಮಾಜಗಳು, ಕೊಡವ ಸಂಘ ಸಂಸ್ಥೆಗಳು, ಕೊಡವ ತಕ್ಕ- ಮುಖ್ಯಸ್ಥರುಗಳ ಸಭೆಯನ್ನು ಏರ್ಪಡಿಸಲಾಗಿದೆ. ಮದುವೆ ಪದ್ಧತಿಯು ಕೊಡವ ಸಂಸ್ಕೃತಿಯ ಬಹುಮುಖ್ಯ ಭಾಗವಾಗಿದ್ದು, ಇದನ್ನು ಇಂದಿನ ನಾಗರೀಕತೆಯ ಭರಾಟೆಯಲ್ಲಿ ಕ್ಷೀಣಿಸಲು ಬಿಡದೆ, ಮೂಲತನದಲ್ಲಿ ಮತ್ತಷ್ಟು ಗಟ್ಟಿಗೊಳಿಸಬೇಕೆಂಬ ದೃಢ ಸಂಕಲ್ಪದಿAದ ಜನಜಾಗೃತಿ ಕಾರ್ಯಕ್ಕೆ ತೊಡಗಿರುವ ‘ತಿರಿಬೊಳ್‌ಚ ಕೊಡವ ಸಂಘ'ವು ಇಂತಹ ಒಂದೊAದು ಮುಖ್ಯವಾದ ಸಾಮಾಜಿಕ ಹಾಗೂ ಸಂಸ್ಕೃತಿಗೆ ಧಕ್ಕೆ ತರುವಂತಹ ಸಮಸ್ಯೆಗಳನ್ನು ಜನಾಂಗೀಯ ಸಹಕಾರದಿಂದ ನಿವಾರಿಸಲು ಮುಂದಾಗಿದೆ. ತಾ. ೩೦ರ ಸಭೆಯಲ್ಲಿ ಕೊಡವ ಮುಖಂಡರ ಒಮ್ಮತದ ಅಭಿಪ್ರಾಯ ಮೇರೆ ಪ್ರಸ್ತುತ ವಿಷಯದಲ್ಲಿ ನಿರ್ಣಯಿಸಲಾಗುವ ಅಂಶಗಳನ್ನು ಕೊಡವ ಜಾಗೃತಿಯ ಮೂಲಕ ಅನುಷ್ಠಾನಕ್ಕೆ ತರಲು ‘ತಿರಿಬೊಳ್‌ಚ ಕೊಡವ ಸಂಘ’ವು ಬಯಸಿದ್ದು. ಎಲ್ಲರ ಸಹಕಾರ ಕೋರಿದೆ ಎಂದು ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಹಾಗೂ ಕಾರ್ಯದರ್ಶಿ ಕಾಳೇಂಗಡ ಸಾವಿತ್ರಿ ಮುತ್ತಪ್ಪ ಕೋರಿದ್ದಾರೆ.