ಭಾಗಮಂಡಲ, ಮಾ. ೨೭: ಚೆಟ್ಟಿಮಾನಿ ವಲಯ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಾರ್ಯಕರ್ತ ರಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಚೆಟ್ಟಿಮಾನಿಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆದಂಬಾಡಿ ರಘುನಾಥ್ ವಹಿಸಿದ್ದರು.
ಕೆಪಿಸಿಸಿ ಪ್ಯಾನಲಿಸ್ಟ್ ಬೇಕಲ್ ರಮಾನಾಥ್, ಹಿರಿಯ ಕಾಂಗ್ರೆಸ್ ಮುಖಂಡ ಟಿ.ಪಿ. ರಮೇಶ್, ಪ್ರಮುಖರಾದ ಸುನಿಲ್ ಪತ್ರಾವೊ ಹ್ಯಾರಿಸ್ಪದಕಲ್ಲು ಪಾಲ್ಗೊಂಡಿದ್ದರು.
ಪಡುಬೀಲು ಕೆ. ಗಣೇಶ್, ಕೆ.ಎನ್. ಕಲಾವತಿ, ಸವಿತಾ ಉದಯ ಕುಮಾರ್, ವಿಶು ಪ್ರವೀಣ್ಕುಮಾರ್, ಕೆ.ಯು. ಹ್ಯಾರೀಸ್, ಪೊಡನೋಳನ ದಿನೇಶ್, ಮಂಗೇರಿರ ಗೌರಮ್ಮ, ಕೊಟ್ಟುಕತ್ತೀರ ಪೂವಯ್ಯ, ಕೆದಂಬಾಡಿ ರಘುನಾಥ್, ಅಸ್ವಾದ್ ಕೆ.ಎಂ. ತೆಕ್ಕಡ ಮಾದಪ್ಪ, ಅಮೆ ಬೊಳ್ಳಮ್ಮ ಮಾಚಯ್ಯ, ಕುಂಬನ ಸೋಮಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಬಷೀರ್, ಕೆ.ಎಂ. ಬಿಂದು ಕಾರ್ಯಪ್ಪ, ಚೀಯಬೆರ ಉತ್ತಯ್ಯ, ಅಜ್ಜಿನಂಡ ಮಿಟ್ಟು ಉತ್ತಪ್ಪ ಇವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಮುಖರಾದ ಮಿನಾಜ್ಪ್ರವೀಣ್, ಸುದೈ ನಾಣಯ್ಯ, ಕೆ.ಟಿ. ರಮೇಶ್, ಸುರೇಂದ್ರ, ದೇವಂಗೋಡಿ ಹರ್ಷ, ಕೆ.ಎಂ. ಇಸ್ಮಾಯಿಲ್ ಹಾಗೂ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.