ವೀರಾಜಪೇಟೆ, ಮಾ. ೨೭: ಕೊಡವರ ಆಚಾರ ವಿಚಾರ, ಪದ್ಧತಿ ಪರಂಪರೆ ಸಂಸ್ಕೃತಿ ಹಾಗೂ ಕೊಡವಾಮೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರುವ ಕೊಡವಕೇರಿ ಹಾಗೂ ಸಂಘಗಳನ್ನು ಒಂದುಗೂಡಿಸಿ ಕೊಡವ ಸಂಘಗಳ ಒಕ್ಕೂಟ ಸ್ಥಾಪಿಸಲಾಗಿದೆ ಎಂದು ಕೊಡವ ಒಕ್ಕೂಟದ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಹೇಳಿದರು. ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ ಪಟ್ಟಣದ ವ್ಯಾಪ್ತಿಯಲ್ಲಿ ೭ ಕೊಡವಕೇರಿ ಹಾಗೂ ಸಂಘಗಳಿದೆ. ಎಲ್ಲಾ ಕೇರಿ ಹಾಗೂ ಸಂಘಗಳ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಗಳನ್ನು ಒಕ್ಕೂಟದ ವ್ಯವಸ್ಥೆಗೆ ಸೇರಿಸಲಾಗಿದೆ ಎಂದರು. ಸಂಘದ ನೂತನ ಕಾರ್ಯದರ್ಶಿಯಾಗಿ ಗಾಂಧಿನಗರ ಕೊಡವಕೇರಿ ಅಧ್ಯಕ್ಷ ಬಾಚಿರ ಜಗದೀಶ್, ಉಪಾಧ್ಯಕ್ಷರಾಗಿ ಚಿಕ್ಕಪೇಟೆ ಕೊಡವಕೇರಿಯ ಮುಕ್ಕಾಟಿರ ರೋಸಿ ಅಚ್ಚಪ್ಪ, ಸಲಹೆಗಾರರಾಗಿ ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷ ವಕೀಲ ಮಾದಂಡ ಪೂವಯ್ಯ, ಖಜಾಂಚಿಯಾಗಿ ಮಲೆತೆರಿಕೆ ಈಶ್ವರ ಕೊಡವ ಸಂಘದ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ, ನಿರ್ದೇಶಕರಾಗಿ ಅಮ್ಮಣಿಚಂಡ ರವಿ ಉತ್ತಪ್ಪ, ಐಚಂಡ ವಾಸು, ನೆಲ್ಲಚಂಡ ಭೀಮಯ್ಯ, ಚೇಂದAಡ ವಸಂತ್ ಕುಮಾರ್, ಮಾದೇಯಂಡ ಹ್ಯಾರಿ ಅಚ್ಚಯ್ಯ, ಪಟ್ಟಡ ಮನು ರಾಮಚಂದ್ರ, ಬೊಳ್ಳಂಡ ಈಶ್ವರಿ ಅಯ್ಯಪ್ಪ, ಅಮ್ಮಣಿಚಂಡ ಯಮುನಾ, ಪಟ್ಟಡ ಪ್ರೇಮಾವತಿ ರಾಮಚಂದ್ರ ಇವರುಗಳು ಆಯ್ಕೆಯಾಗಿದ್ದಾರೆ.