*ಗೋಣಿಕೊಪ್ಪಲು, ಮಾ. ೨೭: ಪೊನ್ನಂಪೇಟೆ ಮತ್ತು ಗೋಣಿಕೊಪ್ಪಲು ಪಂಚಾಯಿತಿ ಚುನಾವಣೆಗೆ ಪೂರ್ವ ಭಾವಿ ತರಬೇತಿಯನ್ನು ತಹಶೀಲ್ದಾರ್ ಯೋಗಾನಂದ್ ಮಾರ್ಗದರ್ಶನದಲ್ಲಿ ನೀಡಲಾಯಿತು. ಪೊನ್ನಂಪೇಟೆ ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಯಿತು.
ಉಪತಹಶೀಲ್ದಾರ್ ಪೊನ್ನು, ಶಿರಸ್ತೇದಾರ ರಾಧಕೃಷ್ಣ, ಐ.ಟಿ.ಐ. ಕಾಲೇಜು ಪ್ರಾಂಶುಪಾಲ
ಹೆಚ್.ಇ. ಯೋಗೇಶ್‌ಕುಮಾರ್, ಚುನಾವಣಾ ಅಧಿಕಾರಿಗಳು, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಹಾಜರಿದ್ದರು.