ವೀರಾಜಪೇಟೆ, ಮಾ. ೨೭: ಅಪರಿಚಿತ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ನಗರದ ಖಾಸಗಿ ಬಸ್ಸು ನಿಲ್ದಾಣದ ಬಳಿ ನಡೆದಿದೆ.
ಖಾಸಗಿ ಬಸ್ಸು ನಿಲ್ದಾಣದ ಸಮೀಪದ ಪಟ್ಟಣ ಪಂಚಾಯಿತಿ ನೂತನ ಕಟ್ಟಡದ ಮೇಲ್ಭಾಗದ ಚಾವಣಿಯ ಮೇಲೆ ೩೬ ವರ್ಷದ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರು ಶುಚಿಗೊಳಿಸುವ ಸಂದರ್ಭ ಶವ ಪತ್ತೆಯಾಗಿದೆ. ಪೌರ ಕಾರ್ಮಿಕರು ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶರೀರವನ್ನು ಮಡಿಕೇರಿಯ ಶವಗಾರದಲ್ಲಿರಿಸಲಾಗಿದೆ.