ಮಡಿಕೇರಿ, ಮಾ. ೨೭: ನಾಗರಹೊಳೆ ಹಾಗೂ ಬಂಡೀಪುರ ವ್ಯಾಪ್ತಿಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಕಾರ್ಯಗಳು ಸೇರಿದಂತೆ ಯಂತ್ರೋಪಕರಣಗಳ ಮೂಲಕ ನಡೆಸಲಾಗುತ್ತಿರುವ ಕಾಮಗಾರಿಗಳ ಕುರಿತ ಆರೋಪದ ಹಿನ್ನೆಲೆ ಅಧಿಕಾರಗಳ ತಂಡ ರಚಿಸಿ ಪರಿಶೀಲನೆ ನಡೆಸಬೇಕಾಗಿ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ. ರಾಷ್ಟç ಪ್ರಾಣಿ ಹುಲಿಯ ಸಂರಕ್ಷಣೆಗೆAದು ೧೯೭೪ ರಲ್ಲಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ೧೯೮೮ ರಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳನ್ನು ರಚಿಸಲಾಯಿತು. ಇದೀಗ ಇಂತಹ ಸಂರಕ್ಷಿತ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಚಟುಚಟಿಕೆ ನಡೆಯುತ್ತಿರುವುದಾಗಿ ವೈಲ್ಡ್ಲೈಫ್ ಫಸ್ಟ್ ಸಂಸ್ಥೆ ಆರೋಪಿಸಿದೆ.ಈ ಸಂಬAಧ ರಿಟ್ ಅರ್ಜಿಯನ್ನು ವಕೀಲ ಅಬ್ದುಲ್ಲಾ ಟಿ.ಐ ಅವರ ಮುಖೇನ ಉಚ್ಚ ನ್ಯಾಯಾಲಯಕ್ಕೆ ಸಂಘ ಸಲ್ಲಿಸಿತ್ತು. ಮಾರ್ಚ್ ೮ ರಂದು ವಿಚಾರಣೆ ನಡೆಸಲಾಗಿ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅಭಯ ಶ್ರೀನಿವಾಸ್ ಓಕ ಹಾಗೂ ನ್ಯಾಯಾಧೀಶ ಎಸ್ ವಿಶ್ವಜಿತ್ ಶೆಟ್ಟಿ ಅವರು, ಅಧಿಕಾರಿಗಳ ತಂಡ ರಚಿಸಿ ನಾಗರಹೊಳೆ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ. ಅರ್ಜಿದಾರರಾದ ವೈಲ್ಡ್ಲೈಫ್ ಫಸ್ಟ್ ಸಂಘ ಆರೋಪಿಸಿರುವಂತೆ ಅನಧಿಕೃತ ಚಟುವಟಿಕೆಗಳು ನಡೆಯುತ್ತಿದೆಯೇ, ಇಲ್ಲವೋ ಎಂಬುದನ್ನು ಅಧಿಕಾರಿಗಳ ತಂಡ ಖಚಿತಪಡಿಸಲಿದೆ. ಪರಿಶೀಲನೆ ನಡೆಸಿದ ನಂತರ ತಂಡವು ವರದಿಯನ್ನು ತಯಾರಿಸಿ ಏಪ್ರಿಲ್ ೬ ರೊಳಗೆ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆದೇಶಿಸಲಾಗಿದೆ. ಏಪ್ರಿಲ್ ೯ ರಂದು ಮತ್ತೆ ವಿಚಾರಣೆ ನಡೆಯಲಿದೆ.