ನಾಪೋಕ್ಲು, ಮಾ. ೨೭: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವವು ವಿಜೃಂಭಣೆಯಿAದ ನೆರವೇರಿತು.ಶನಿವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತು ಪೋರಾಟ ಮತ್ತು ಬಲಿವಾಡುವಿನ ಆಗಮನದೊಂದಿಗೆÀ ದೇವಳದಲ್ಲಿ ಉತ್ಸವ ಆರಂಭಗೊAಡಿತು. ಅದರೊಂದಿಗೆ ಇನ್ನಿತರ ತಕ್ಕಮುಖ್ಯಸ್ಥರ ಎತ್ತು ಪೋರಾಟ ಸೇವೆಗಳೂ ಸಂಪ್ರದಾಯದAತೆ ನಡೆದವು. ನಂತರ ಭಕ್ತರ ತುಲಾಭಾರ ಸೇವೆಗಳು, ಮಧ್ಯಾಹ್ನದ ಮಹಾಪೂಜೆ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿಯೊಂದಿಗೆ ಐದು ಕಿ.ಮೀ. ದೂರದ ಆದಿ ಸ್ಥಳ ಮಲ್ಮ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮೀಪದ ನೆಲಜಿ ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು, ಹಾಗೂ ಪೇರೂರು ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು ಭಕ್ತಾದಿಗಳು ಎತ್ತುಪೋರಾಟದೊಂದಿಗೆ ಮಲ್ಮ ಬೆಟ್ಟದಲ್ಲಿ ಹಾಜರಿದ್ದರು. ಮೂರು ಇಗ್ಗುತ್ತಪ್ಪ ದೇವಾಲಯಗಳ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ದೈವಿಕ ವಿಧಿವಿಧಾನಗಳು ನೈವೇದ್ಯ, ಪೂಜೆ, ಹರಕೆ ಸೇವೆಗಳನ್ನು ನೆರವೇರಿಸಿ ದೇವ ಕಟ್ಟನ್ನು ಹಿಂತೆಗೆಯಲಾಯಿತು. ರಾತ್ರಿ ದೇವಾಲಯದಲ್ಲಿ ಉತ್ಸವ ಮೂರ್ತಿಯ ನೃತ್ಯೋತ್ಸವದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊAಡಿತು.
ದೈವಿಕ ವಿಧಿವಿಧಾನಗಳನ್ನು ವೇದ ಮೂರ್ತಿಗಳಾದ ಕುಶ ಭಟ್, ಜಗದೀಶ್, ಶ್ರೀನಿವಾಸ ಹೆಬ್ಬಾರ್ ಮತ್ತಿತರರು ನೆರವೇರಿಸಿದರು.ಕೊರೊನಾ ಹಿನೆÀ್ನಲೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ವತಿಯಿಂದ ದೇವಳದಲ್ಲಿ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಸೇರಿದಂತೆ ಎಲ್ಲಾ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿತ್ತು. ಭಕ್ತರಾದ ಪರದಂಡ ವಿಠಲ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿದರು. ಉತ್ಸವದಲ್ಲಿ ದೇವಳಕ್ಕೆ ಸಂಬAಧಿಸಿದ ಎಲ್ಲಾ ತಕ್ಕಮುಖ್ಯಸ್ಥರು.
(ಮೊದಲ ಪುಟದಿಂದ) ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಭಕ್ತ ಜನಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ, ಕಾರ್ಯದರ್ಶಿ ಬೊಳಂದAಡ ಲಲಿತಾ ನಂದಕುಮಾರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತಜನ ಸಂಘದ ನಿರ್ದೇಶಕರು, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ ಮತ್ತಿತರರು ಹಾಜರಿದ್ದರು.
ನೆಲಜಿ ಇಗ್ಗುತ್ತಪ್ಪ ದೇವಳದಲ್ಲಿಯೂ ಉತ್ಸವ: ನೆಲಜಿ ಇಗ್ಗುತ್ತಪ್ಪ ದೇವಳದಲ್ಲಿಯೂ ಕುಂಬ್ಯಾರು ಕಲಾಡ್ಚ ಉತ್ಸವ ನಡೆಯಿತು. ಈ ಪ್ರಯುಕ್ತ ಎತ್ತು ಪೋರಾಟ, ತುಲಾಭಾರ ಸೇವೆ, ಮಹಾಪೂಜೆ, ದೇವರಬಲಿ, ಅನ್ನಸಂತರ್ಪಣೆ ನಡೆಯಿತು. ಭಕ್ತಾದಿಗಳು ತಾವು ಬೆಳೆದ ಕಾಫಿ, ಕಾಳು ಮೆಣಸು ಮತ್ತಿತರ ವಸ್ತುಗಳನ್ನು ದೇವರ ಸನ್ನಿದಿಗೆ ಅರ್ಪಿಸಿದರು.
ದೈವಿಕ ವಿಧಿ ವಿಧಾನಗಳನ್ನು ರಮೇಶ್ ಶರ್ಮ, ಸುರೇಶ್ ಶರ್ಮ, ಸಂತೋಷ್ ಹೆಬ್ಬಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಳಕ್ಕೆ ಸಂಬAಧಿಸಿದ ಎಲ್ಲಾ ತಕ್ಕಮುಖ್ಯಸ್ಥರು, ಗ್ರಾಮಸ್ಥರು, ಭಕ್ತಾಧಿಗಳು ನೆರೆದಿದ್ದರು.
-ಪಿ.ವಿ.ಪ್ರಭಾಕರ್