ಮಡಿಕೇರಿ, ಮಾ. ೨೬: ಭಾರತೀಯ ಸೇನೆಗೆ ಸೇನಾ ನೇಮಕಾತಿಯು ಕೋಲಾರದಲ್ಲ್ಲಿ ಮೇ ೭ ರಿಂದÀ ೧೨ ರವರೆಗೆ ನಡೆಯಲಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೨೬ ಏಪ್ರಿಲ್. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಹಾಗೂ ಚಿತ್ರದುರ್ಗ ಜಿಲ್ಲೆಯವರು ಭಾಗವಹಿಸಬಹುದು.

೧೦ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ. ಈ ಸೇನಾ ನೇಮಕಾತಿಗೆ ದೈಹಿಕ ಮತ್ತು ಲಿಖಿತ ಪರೀಕ್ಷೆಗೆ ತರಬೇತಿಯನ್ನು ಜೈ ಭಾರತ್ ತರಬೇತಿ ಕೇಂದ್ರ ನೀಡುತ್ತಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಳ್ಳಬಹುದು. ತರಬೇತಿಗಾಗಿ ಮೊ. ೮೨೭೭೩೩೨೩೬೭, ೯೪೪೮೫೧೩೯೧೫ ಸಂಖ್ಯೆಯನ್ನು ಸಂಪರ್ಕಿಸಬಹುದು.