ಮಡಿಕೇರಿ, ಮಾ. ೨೬: ಮಡಿಕೇರಿ ತಾಲೂಕಿನ ಕಣ್ಣ ಬಲಮುರಿ ಗ್ರಾಮದ, ಕಾವೇರಿ ನದಿ ದಡದ ಎಡಭಾಗ ದಲ್ಲಿರುವ ಶ್ರೀ ಮಾರಿಯಮ್ಮ ದೇವಾಲಯದ ೮ನೇ ವರ್ಷದ ಜಾತ್ರಾ ಮಹೋತ್ಸವ ತಾ.೨೯ ರಿಂದ ತಾ.೩೧ ರವರೆಗೆ ನಡೆಯಲಿದೆ. ತಾ.೨೮ ರಂದು (ನಾಳೆ) ಬೆಳಿಗ್ಗೆ ಆದಿಸ್ಥಳ ಪಿರಿಯಾಪಟ್ಟಣಕ್ಕೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ. ಅಂದು ಸಂಜೆ ೪:೩೦ಕ್ಕೆ ಕಾವೇರಿ ನದಿಯಿಂದ ಕಳಸ ತರಲಾಗುವುದು.
ತಾ.೨೯ ರಂದು ಅಪರಾಹ್ನ ೩ ಗಂಟೆಗೆ ದೇವಾಲಯದಿಂದ ಮೂರ್ನಾಡಿನವರೆಗೆ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ದೇವಿಯ ಮೆರವಣಿಗೆ ನಡೆಯಲಿದೆ. ತಾ.೩೦ ರ ಅಪರಾಹ್ನ ೩ ಗಂಟೆಗೆ ವಾಟೆಕಾಡುವಿನಿಂದ ಹೊರಟು ಬಲಮುರಿ ದೇವಾಲಯದ ವರೆಗೆ ವಾದ್ಯಗೋಷ್ಠಿ ನಡೆಯಲಿದೆÀ. ಸಂಜೆ ೫ ಗಂಟೆಗೆ ಕಾವೇರಿ ನದಿಯಲ್ಲಿ ಗಂಗಾ ಸ್ನಾನ, ನಂತರ ದೇವಿಯ ಮೆರವಣಿಗೆಯೊಂದಿಗೆ ದೇವಾಲಯ ಪ್ರದಕ್ಷಿಣೆ, ರಾತ್ರಿ ೯:೩೦ ಗಂಟೆಯಿAದ ಮಹಾಪೂಜೆ, ಮಂಗಳಾರತಿ, ಹೂವಿನ ವರ ಬೇಡುವಿಕೆ, ರಾತ್ರಿ ೧೦:೩೦ ರಿಂದ ವಾದ್ಯಗೋಷ್ಠಿಯೊಂದಿಗೆ ಪ್ರತಿ ಮನೆಯಿಂದ ದೇವಿಗೆ ಆರತಿ ಒಪ್ಪಿಸುವುದು.
ತಾ.೩೧ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧.೩೦ ವರೆಗೆ ಶ್ರೀ ದೇವಿಗೆ ಹರಕೆ ಮತ್ತು ಕಾಣಿಕೆ ಒಪ್ಪಿಸಲಾಗುವುದು. ತಾ.೩೦ ರ ರಾತ್ರಿ ಹಾಗೂ ತಾ.೩೧ ರ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಹರಕೆಗಳಿದ್ದಲ್ಲಿ ತಾ.೩೧ ರ ಮಧ್ಯಾಹ್ನ ೧ ಗಂಟೆಯ ಒಳಗೆ ದೇವಾಲಯಕ್ಕೆ ತಲುಪಿಸಬೇಕಾಗಿ ದೇವಾಲಯ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.