ಮಡಿಕೇರಿ, ಮಾ. ೨೬: ಮಡಿಕೇರಿ ನಗರದ ಶ್ರೀ ವಿನಾಯಕ ಕೊಡವ ಕೇರಿ ಸಂಘದ ೨೦೧೯-೨೦ ಹಾಗೂ ೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಚೊಟ್ಟೆರ ಕೆ. ಅಪ್ಪಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇರಿಯ ಅಭಿವೃದ್ಧಿ ಸಂಘದ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಿತು.

ಅಧ್ಯಕ್ಷರು ತಮ್ಮ ಭಾಷಣದಲ್ಲಿ ಕೇರಿಯ ಬೆಳವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆ, ಕೇರಿ ಮೇಳದಲ್ಲಿ ಪಾಲ್ಗೊಂಡು ದೊರೆತ ಬಹುಮಾನಗಳ ಮಾಹಿತಿ ನೀಡಿದರು. ನೂತನ ಸದಸ್ಯರ ಪರಿಚಯ, ಸ್ವರ್ಗಸ್ಥರಾದ ಸದಸ್ಯರ ಆತ್ಮಕ್ಕೆ ಸಭೆಯಲ್ಲಿ ಶಾಂತಿ ಕೋರಲಾಯಿತು. ಕಾರ್ಯದರ್ಶಿ ಬಲ್ಯಂಡ ವಿಜು ನಂಜಪ್ಪ ನಡಾವಳಿಕೆ ವಾಚಿಸಿ, ನಿರ್ದೇಶಕ ಕೂಡುವಂಡ ಸಾಬು ಉತ್ತಪ್ಪ ಲೆಕ್ಕ ಪತ್ರ ಮಂಡಿಸಿದರು. ಖಜಾಂಚಿ ನೆರವಂಡ ಶ್ಯಾಂ ಚರ್ಮಣ ಸಮಿತಿಯ ವರದಿ ಓದಿದರು.

ಕೇರಿಯ ಹಿರಿಯರಾದ ಬೊಟ್ಟೋಳಂಡ ದೇಚವ್ವ ಪೂಣಚ್ಚ ಹಾಗೂ ಬದ್ದಂಜೆಟ್ಟಿರ ದೇಚಮ್ಮ ನವರುಗಳನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಕೇರಿ ಸದಸ್ಯರ ಮಕ್ಕಳಿಗೆ ನಗದು ಬಹುಮಾನ ನೀಡಲಾಯಿತು. ಮುಂದಿನ ಅವಧಿಗೆ ನೂತನ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆಯಿತು.

ಕುಡುವಂಡ ಸಾಬು ಉತ್ತಪ್ಪ, ಅಧ್ಯಕ್ಷ ಮಂಡೇಟಿರ ಡೇಝಿ ಮಂದಪ್ಪ ಉಪಾಧ್ಯಕ್ಷೆ ಪೆಮ್ಮಡಿಯಂಡ ಸುಧಾ ಉತ್ತಪ್ಪ, ಕಾರ್ಯದರ್ಶಿ ಕನ್ನಿಕಂಡ ಮೋನಿಕಾ ಚಂಗಪ್ಪ, ಖಜಾಂಚಿ ಆಯ್ಕೆಯಾದರು. ನಿರ್ದೇಶಕರಾಗಿ ಬಲ್ಯಂಡ ವಿಜು ನಂಜಪ್ಪ, ಎಳ್ತಂಡ ಮಂಜುನಾಥ್ ಕುಮಾರ್, ಪಾಲಂದಿರ ಹ್ಯಾರಿ ತಿಮ್ಮಯ್ಯ, ನೆರವಂಡ ಅನಿತಾ ಚರ್ಮಣ, ಪಚ್ಚಾರಂಡ ಸುಬ್ರಮಣಿ, ಓಡಿಯಂಡ ಎಂ. ತಿಮ್ಮಯ್ಯ, ಕೇಕಡ ಕೆ. ಕುಟ್ಟಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ರತಿ, ಸಾಂಸ್ಕೃತಿಕ ಅಧ್ಯಕ್ಷರಾಗಿ ಚೊಟ್ಟೆಯಂಡ ಕೆ. ಅಪ್ಪಾಜಿ ನೇಮಕಗೊಂಡರು.