ವೀರಾಜಪೇಟೆ, ಮಾ. ೨೬: ನೀರು ವಿಶಿಷ್ಟವಾದ ವಸ್ತು, ಜೀವಜಲ ಎನ್ನುತ್ತೇವೆ. ಅದನ್ನು ತುಂಬಾ ಪೋಲು ಮಾಡುತ್ತೇವೆ. ಇದು ಹೀಗೇ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ ನೀರನ್ನು ಹಣ ಕೊಟ್ಟು ಕೊಳ್ಳುವ ಸ್ಥಿತಿ ಬಂದರೂ ಬರಬಹುದಾಗಿದೆ. ಆದ್ದರಿಂದ ನೀರನ್ನು ಮಿತವಾಗಿ ಬಳಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ, ನೀರನ್ನು ಮಿತವಾಗಿ ಬಳಸದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿಯೇ ಯುದ್ಧ ಮಾಡುವಂಥ ಪರಿಸ್ಥಿತಿ ಎದುರಾಗಲಿದೆ ಎಂದು ಜಮಾಅತ್ ಸದಸ್ಯ ಶಫೀಕ್ ಹೇಳಿದರು.

ವಿಶ್ವ ಜಲದಿನಾಚರಣೆ ಅಂಗವಾಗಿ ಎಸ್.ಕೆ.ಎಸ್.ಬಿ.ವಿ.ದಾರುಲ್ ಇಸ್ಲಾಂ ಮದರಸ ಕಲ್ಲುಬಾಣೆ ಶಾಖೆ ವತಿಯಿಂದ ಕಲ್ಲುಬಾಣೆ ಬದ್ರಿಯಾ ಶಾಲಾ ಸಭಾಂಗಣದಲ್ಲಿ ‘ಪಕ್ಷಿಗಳಿಗೊಂದು ನೀರಿನ ಮಡಿಕೆ’ ಎಂಬ ವಿನೂತನ ಶಿರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮಡಿಕೆಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಶಫೀಕ್ ನೀರನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ, ನೀರು ಈ ಭೂಮಿಗೆ ಪ್ರಕೃತಿದತ್ತವಾಗಿ ಬಂದ ಅಮೂಲ್ಯವಾದ ಕೊಡುಗೆ. ಅದನ್ನು ವ್ಯರ್ಥವಾಗಿ ಪೋಲು ಮಾಡದೆ ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆ ಎಂದರು.

ನೆಲ್ಲಿಹುದಿಕೇರಿಯ ಅಬ್ದುಲ್ಲ ಮಾತನಾಡಿ, ವಿದ್ಯಾರ್ಥಿಗಳು ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಮಾನವೀಯ ಕಾರ್ಯಕ್ಕೆ ಒತ್ತು ನೀಡಬೇಕು ಎಂದು ನುಡಿದರಲ್ಲದೆ ಭೂಮಿಯಲ್ಲಿ ಶೇ. ೭೧ ರಷ್ಟು ಪ್ರಮಾಣದ ನೀರಿದ್ದರೂ , ಈ ಪೈಕಿ ಶೇ.೯೬.೫ರಷ್ಟು ಉಪುö್ಪ ನೀರು. ಶೇ.೩.೧ರಷ್ಟು ಗಡಸು ನೀರಾಗಿದ್ದು, ೨.೫ರಷ್ಟು ನೀರು ಮಾತ್ರ ಕುಡಿಯಲು ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮಡಿಕೆಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಶಫೀಕ್ ನೀರನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ, ನೀರು ಈ ಭೂಮಿಗೆ ಪ್ರಕೃತಿದತ್ತವಾಗಿ ಬಂದ ಅಮೂಲ್ಯವಾದ ಕೊಡುಗೆ. ಅದನ್ನು ವ್ಯರ್ಥವಾಗಿ ಪೋಲು ಮಾಡದೆ ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆ ಎಂದರು.

ನೆಲ್ಲಿಹುದಿಕೇರಿಯ ಅಬ್ದುಲ್ಲ ಮಾತನಾಡಿ, ವಿದ್ಯಾರ್ಥಿಗಳು ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಮಾನವೀಯ ಕಾರ್ಯಕ್ಕೆ ಒತ್ತು ನೀಡಬೇಕು ಎಂದು ನುಡಿದರಲ್ಲದೆ ಭೂಮಿಯಲ್ಲಿ ಶೇ. ೭೧ ರಷ್ಟು ಪ್ರಮಾಣದ ನೀರಿದ್ದರೂ , ಈ ಪೈಕಿ ಶೇ.೯೬.೫ರಷ್ಟು ಉಪುö್ಪ ನೀರು. ಶೇ.೩.೧ರಷ್ಟು ಗಡಸು ನೀರಾಗಿದ್ದು, ೨.೫ರಷ್ಟು ನೀರು ಮಾತ್ರ ಕುಡಿಯಲು ಕೊಂಡೊಯ್ಯುವ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ ಎಂದರು.

ವೇದಿಕೆಯಲ್ಲಿ ಜಮಾಅತ್ ಆಡಳಿತ ಮಂಡಳಿ ಅಧ್ಯಕ್ಷ ಪಿ.ಕೆ.ಅಪ್ಸಲ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕು಼ಞ್ಞನ್, ಎಸ್ ಕೆ ಎಸ್.ಬಿ ವಿ ಅಧ್ಯಕ್ಷ ಶಪ್ವಾನ್, ಮದರಸದ ಉಸ್ತಾದ್ ಇನ್ನಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಕಲ್ಲುಬಾಣೆ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಕೆಲಸ ನಿರ್ವಹಿಸುತ್ತಿರುವ ಫಿಲೋಮಿನಾ ಮೇರಿ ಅವರನ್ನು ಶಾಖೆ ವತಿಯಿಂದ ಸನ್ಮಾನಿಸಲಾಯಿತು.

ಜ¯ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.

ಈ ಸಂದರ್ಭ ವಿದ್ಯಾರ್ಥಿಗಳು ಜಲಸಂರಕ್ಷಣೆ ಕ್ಯಾಂಪೇನ್ ಎಂಬ ಬಿತ್ತಿಪತ್ರ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮದರಸದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.