ಮಡಿಕೇರಿ, ಮಾ. ೨೬: ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಕ್ರಿಯತೆಯ ಮೂಲಕ ಅದನ್ನು ಪವಿತ್ರ ಕಾರ್ಯ ಎಂಬAತೆ ಶಿಕ್ಷಕ ವೃಂದ ನಿರ್ವಹಿಸಬೇಕೆಂದು ಶಿಕ್ಷಣ ತಜ್ಞೆ ವಿದ್ಯಾಹರೀಶ್ ಕರೆ ನೀಡಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಮೂರು ವರ್ಷಗಳ ಕಾಲ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವಿದ್ಯಾಹರೀಶ್ ಆಡಳಿತ ಮಂಡಳಿಯ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿನ ಶಿಕ್ಷಣ ಸೇವೆ ಸಾರ್ಥಕತೆ ಮೂಡಿಸಿದೆ. ವಿದ್ಯಾದಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕ ವೃಂದ ನಿಸ್ವಾರ್ಥವಾಗಿ ಮಕ್ಕಳಿಗೆ ಜ್ಞಾನ ನೀಡುವ ಕೈಂಕರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆಯೂ ಅವರು ಹೇಳಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಪಿ. ಉತ್ತಪ್ಪ ಮಾತನಾಡಿ, ರಾಷ್ಟಿçÃಯ ಶಿಕ್ಷಣ ನೀತಿ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ವಿದ್ಯಾಹರೀಶ್ ಅವರ ಶೈಕ್ಷಣಿಕ ಮಾರ್ಗದರ್ಶನದಿಂದಾಗಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.

ಶಾಲಾ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಅನೇಕ ಮಕ್ಕಳಿಗೆ ಸಮಯದ ಪರಿವೇ ಇಲ್ಲದೆ ವಿದ್ಯಾಭ್ಯಾಸ ನೀಡಿದ ವಿದ್ಯಾಹರೀಶ್ ಅಪರೂಪದ ಶಿಕ್ಷಣ ತಜ್ಞೆಯಾಗಿದ್ದಾರೆ. ಅವರ ನಿಸ್ವಾರ್ಥ ಶಿಕ್ಷಣ ಸೇವೆ ಅನುಕರಣೀಯವಾಗಿದೆ. ಇವರ ಶೈಕ್ಷಣಿಕ ನೈಪುಣ್ಯತೆ ಶಿಕ್ಷಕ ವೃಂದಕ್ಕೆ ಆದರ್ಶಪ್ರಾಯ ಎಂದು ಶ್ಲಾಘಿಸಿದರು.

ಶಾಲಾ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಶೈಕ್ಷಣಿಕ ಸಮಿತಿಯ ಅಧ್ಯಕ್ಷೆ ಊರ್ವಶಿ, ಆಡಳಿತ ಮಂಡಳಿ ಪ್ರತಿನಿಧಿ ಪವಿತ್ರ ಅಪ್ಪಯ್ಯ, ಕ್ರೀಡಾಸಮಿತಿ ಅಧ್ಯಕ್ಷ ರಘು ಮಾದಪ್ಪ, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಗುರುದತ್, ನಕುಲ್ ಹಾಜರಿದ್ದರು. ಚಿತ್ರಾನಂಜಪ್ಪ ಪ್ರಾರ್ಥಿಸಿ, ವನಿತಾ ಚಂಗಪ್ಪ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ವಿದ್ಯಾಹರೀಶ್ ಅವರನ್ನು ಆಡಳಿತ ಮಂಡಳಿ, ಶಿಕ್ಷಕ ವೃಂದವು ಸನ್ಮಾನಿಸಿ, ಬೀಳ್ಕೊಡುಗೆ ನೀಡಿತು.