ಮಡಿಕೇರಿ, ಮಾ. ೨೬: ನಮ್ಮೆಲ್ಲರ ನಡೆ ಸುಪೋಷಿತ ಕರ್ನಾಟಕವನ್ನು ರೂಪಿಸುವ ಕಡೆಗೆ ವಾಲಬೇಕು. ಏಕೆಂದರೆ ಈ ಯಾಂತ್ರಿಕ ಯುಗದಲ್ಲಿ ಜನರು ಪೌಷ್ಟಿಕ ಆಹಾರವನ್ನು ಸೇವಿಸಲು ಮರೆಯುತ್ತಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಹೇಳಿದರು.

ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಬಾಲಭವನದಲ್ಲಿ ನಡೆದ ಪೋಷಣ್ ಅಭಿಯಾನ್ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಗಳಲ್ಲಿ ಅತಿ ಹೆಚ್ಚಾಗಿ ಮಹಿಳೆಯರು ಅನಾರೋಗ್ಯದಿಂದ ಬಳಲುತ್ತಿರುವುದು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಆರೋಗ್ಯದ ಅರಿವಿನ ಕೊರತೆ ಮತ್ತು ಅವರ ನಿರ್ಲಕ್ಷö್ಯ, ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷö್ಯ ತೋರಬಾರದು.

ಪೌಷ್ಟಿಕ ಅಹಾರಕ್ಕೆ ಹಣದ ಒತ್ತಡ ಇಲ್ಲ ಯಾಕೆಂದರೆ ನಮ್ಮ ಮನೆಯ ಸುತ್ತಮುತ್ತಲು ಸಿಗುವ ನೈಸರ್ಗಿಕ ಪೌಷ್ಟಿಕ ಆಹಾರ ಸೇವನೆ ಮಾಡಿದರೆ ಸಾಕಾಗುತ್ತದೆ ಎಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ವಿ. ನಿಂಗರಾಜಪ್ಪ ಅವರು ಮಾತನಾಡಿ ಮಾನಸಿಕ, ದೈಹಿಕ, ಶಾರೀರಿಕ ಬೆಳವಣಿಗೆಗಳ ಕಡೆಗೆ ಅತಿ ಹೆಚ್ಚಾದ ಗಮನ ಹರಿಸಬೇಕಾಗುತ್ತದೆ. ದಿನನಿತ್ಯದ ಒತ್ತಡಗಳ ನಡುವೆ ಆರೋಗ್ಯವನ್ನು ನಿರ್ಲಕ್ಷö್ಯ ಮಾಡುತ್ತಿದ್ದೇವೆ; ಇದು ಸರಿಯಲ್ಲ ಎಂದರು.

ಹಿರಿಯ ಆರೋಗ್ಯಾಧಿಕಾರಿ ಡಾ. ಶ್ರೀನಾಥ್ ಮಾತನಾಡಿ, ಈ ನವ ಯುಗದಲ್ಲಿ ನಾವು ಅತಿ ಹೆಚ್ಚಾಗಿ ತಂತ್ರಜ್ಞಾನಕ್ಕೆ ಅವಲಂಭಿತರಾಗಿದ್ದೇವೆ. ಹಣ ಕೈಯಲ್ಲಿ ಇದ್ದರೆ ಎಲ್ಲವೂ ಹತ್ತಿರಕ್ಕೆ ಬರುತ್ತದೆ ಎಂಬ ಮನೋಭಾವ ಇದ್ದು, ಇದರಿಂದ ಹೊರಬರಬೇಕು ಎಂದರು.

ಸ್ವಚ್ಛತೆಯನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ರೋಗಗಳು ನಮ್ಮ ಪಕ್ಕ ಸುಳಿಯುವುದಿಲ್ಲ ಎಂದು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ಸಹಾಯಕರು ಕಾವ್ಯ, ಜಿಲ್ಲಾ ನಿರೂಪಣಾಧಿಕಾರಿ ಸಿ.ಎ. ಅಣ್ಣಯ್ಯ, ಜಿಲ್ಲಾ ಸ್ತಿçà ಶಕ್ತಿ ಒಕ್ಕೂಟದ ಅಧ್ಯಕ್ಷೆ ರೆಹನಾ ಸುಲ್ತಾನ, ಜಿಲ್ಲಾ ವಿಶೇಷಚೇತನರ ಇಲಾಖೆ ಅಧಿಕಾರಿ ಸಂಪತ್ ಕುಮಾರ್, ಪೋಷÀಣಾ ಅಭಿಯಾನ ಯೋಜನೆ ಜಿಲ್ಲಾ ಸಂಯೋಜಕ ನಿತಿನ್ ಪಿ.ಬಿ ಮತ್ತು ಇತರರು ಪಾಲ್ಗೊಂಡಿದ್ದರು. ಸತ್ಯಭಾಮ ನಿರೂಪಿಸಿದರು. ಪೂಣಚ್ಚ ಪಿ.ಎ. ವಂದಿಸಿದರು.

ಕಾರ್ಯಕ್ರಮಕ್ಕೂ ಮೊದಲು ಪೋಷಣ ರಥದೊಂದಿಗೆ ಪೋಷಣಾ ಜಾಥಾವು ನಗರದ ಕಾವೇರಿ ಕಲಾ ಕ್ಷೇತ್ರದಿಂದ ಬಾಲಭವನದವರೆಗೆ ನಡೆಯಿತು