ಸೋಮವಾರಪೇಟೆ,ಮಾ.೨೬: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಲವು ಮಾರ್ಗೋಪಾಯಗಳು, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದ್ದರೂ ಸಹ ಹಲವಷ್ಟು ಮಂದಿ ಇದನ್ನು ಪಾಲಿಸುತ್ತಿಲ್ಲ.

ಈ ಹಿನ್ನೆಲೆ ಪ.ಪಂ. ಅಧಿಕಾರಿ ಹಾಗೂ ಸಿಬ್ಬಂದಿಗಳು ಇಂದು ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮಾಸ್ಕ್ ಧರಿಸದ ಅಂಗಡಿಗಳ ಮಾಲೀಕರು ಹಾಗೂ ಕೆಲಸಗಾರರಿಗೆ ದಂಡ ವಿಧಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಹಾಗೂ ಸಿಬ್ಬಂದಿಗಳು ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ, ಗ್ಲೌಸ್ ಧರಿಸುವಂತೆ ನಿರ್ದೇಶನ ನೀಡಿದರು. ಇದರೊಂದಿಗೆ ತಿಂಡಿ ತಿನಿಸು ಮಾರುವವರು ಕಡ್ಡಾಯವಾಗಿ ಕೈಗಳಿಗೆ ಗ್ಲೌಸ್ ಧರಿಸುವಂತೆ ಸೂಚಿಸಿದರು.