ವೀರಾಜಪೇಟೆ, ಮಾ. ೨೬: ಮಡಿಕೇರಿಯಲ್ಲಿರುವ ಐತಿಹಾಸಿಕ ಪುರಾತನವಾದ ಗದ್ದುಗೆ ಹಾಗೂ ಇದಕ್ಕೆ ಸೇರಿದ ಜಾಗವನ್ನು ಸಂರಕ್ಷಿಸುವAತೆ ರಾಜ್ಯ ಉಚ್ಚನ್ಯಾಯಾಲಯದ ವಿಭಾಗೀಯಪೀಠದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಅವರು ಆದೇಶಿಸಿದರು. ಕೊಡಗಿನ ಐಎಎಸ್ ನಿವೃತ್ತ ಅಧಿಕಾರಿ ಜೆ.ಎಸ್.ವಿರೂಪಾಕ್ಷಪ್ಪ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ಗದ್ದುಗೆಗೆ ಸೇರಿದ ಜಾಗವನ್ನು ಅನೇಕ ಮಂದಿ ಒತ್ತುವರಿ ಮಾಡಿ ಮನೆ ಕಟ್ಟಿಕೊಂಡು ಗದ್ದುಗೆಯ ಸ್ಮಾರಕದ ಅಂದಗೆಡವಿದ್ದಾರೆ. ಇದನ್ನು ಸಂರಕ್ಷಿಸಲು ಸರಕಾರ ವಿಫಲಗೊಂಡಿರುವುದಾಗಿ ದೂರಿದ್ದಾರೆ.

ಅರ್ಜಿದಾರರಾದ ವಿರೂಪಾಕ್ಷಪ್ಪ ಅವರ ಪರವಾಗಿ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದ ವಕೀಲ ಎನ್.ರವೀಂದ್ರನಾಥ್ ಕಾಮತ್ ಅವರು ಈ ಹಿಂದೆ ಕೇಂದ್ರ ಸರಕಾರದ ಅಧೀನದಲ್ಲಿದ್ದ ಮಡಿಕೇರಿ ಗದ್ದುಗೆ ಕಳೆದ ೧೯೮೧ ರಲ್ಲಿ ಇದನ್ನು ರಾಜ್ಯ ಸರಕಾರಕ್ಕೆ ವಹಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಇದರ ಸಂರಕ್ಷಣೆ ಬಗ್ಗೆ ಸರಕಾರ ಕಾಳಜಿ ವಹಿಸದ್ದರಿಂದ ಗದ್ದುಗೆಯ ಕಟ್ಟಡಗಳ ಶಿಥಿಲಾವಸ್ಥೆಗೆ ಕಾರಣವಾಗಿದೆ.

ಜೊತೆಗೆ ಈ ರಾಜರ ಗದ್ದುಗೆಗೆ ಸುಮಾರು ೧೯ ಎಕರೆ ೮೬ ಸೆಂಟುಗಳಷ್ಟು ಖಾಲಿ ಜಾಗ ಇದೆ. ಇದರಲ್ಲಿ ಬಹುಪಾಲು ಜಾಗವನ್ನು ಕೆಲವರು ಅತಿಕ್ರಮಿಸಿ ಕಟ್ಟಡವನ್ನು ಕಟ್ಟಿಕೊಂಡಿದ್ದಾರೆ. ಈ ಸಂಬAಧದಲ್ಲಿ ಮಡಿಕೇರಿ ತಾಲೂಕು ತಹಶೀಲ್ದಾರ್ ಅವರಿಗೆ ೧೨ ವರ್ಷಗಳ ಹಿಂದೆಯೇ ದೂರು ನೀಡಲಾಗಿದ್ದರೂ ಗದ್ದುಗೆ ಜಾಗದ ಅತಿಕ್ರಮಣಕಾರರನ್ನು ತೆರವುಗೊಳಿಸಲು ಅಧಿಕಾರಿಗಳು ವಿಫಲಗೊಂಡಿದ್ದಾರೆ. ಗದ್ದುಗೆ ಹಾಗೂ ಇದರ ಜಾಗವನ್ನು ಸಂರಕ್ಷಿಸುವAತೆ ವಿಭಾಗೀಯ ಪೀಠದ ಮುಂದೆ ವಾದಿಸಿದರು.

ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರು ಗದ್ದುಗೆಯ ಜಾಗವನ್ನು ಸರ್ವೆ ಮಾಡಿ ಅತಿಕ್ರಮಿಸಿರುವ ಜಾಗವನ್ನು ಗುರುತಿಸಬೇಕು.ನಂತರ ಅತಿಕ್ರಮಣಕಾರರನ್ನು ತೆರವುಗೊಳಿಸಿ ಗದ್ದುಗೆಯನ್ನು ಸಂರಕ್ಷಿಸುವುದರೊAದಿಗೆ ಗದ್ದುಗೆಯನ್ನು ಎಲ್ಲ ರೀತಿಯಿಂದಲೂ ಸ್ಮಾರಕವಾಗಿ ರಕ್ಷಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಆದೇಶಿಸಿದರು. ಈ ಸಂಬAಧದಲ್ಲಿ ಅಧಿಕಾರಿಗಳು ಕೈಗೊಂಡಿರುವ ಕ್ರಮದ ಕುರಿತು ವಿವರವಾದ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆ ದಾಖಲೆ ಸಮೇತ ವಿಭಾಗೀಯ ಪೀಠದ ಗಮನಕ್ಕೆ ತರುವಂತೆ ಹಾಗೂ ಪ್ರಮಾಣ ಪತ್ರ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಿದರು.

ವಿಭಾಗೀಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಓಕ ಅವರೊಂದಿಗೆ ನ್ಯಾಯಾಧೀಶ ಸೂರಜ್ ಗೋವಿಂದ್ ಹಾಜರಿದ್ದರು. ರಿಟ್

ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮೇ ೨೮ಕ್ಕೆ ಮುಂದೂಡಿದರು. ಸರಕಾರದ ಪರವಾಗಿ ವಿಜಯ್‌ಕುಮಾರ್ ಪಾಟೀಲ್ ವಾದಿಸಿದರು. -ಡಿ.ಎಂ.ಆರ್.