ಮಡಿಕೇರಿ, ಮಾ. ೨೬: ಮಡಿಕೇರಿ ನಗರ ಹಿತರಕ್ಷಣಾ ವೇದಿಕೆಯ ದ್ವಿತೀಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಸಮುದ್ರ ಪಾರ್ಟಿ ಹಾಲ್‌ನಲ್ಲಿ ನಡೆಯಿತು.

ಗಿಡಕ್ಕೆ ನೀರೆರೆಯುವ ಮೂಲಕ ಪರಿಸರ ಸಂರಕ್ಷಣಾ ಧ್ಯೇಯವನ್ನು ಹೊತ್ತು ಕಾರ್ಯಕ್ರಮವನ್ನು ಆರಂಭಿಸಲಾಯಿತು. ವೇದಿಕೆಯ ವಾರ್ಷಿಕ ವರದಿಯನ್ನು ನಾಗೇಶ್ ಸಭೆಯಲ್ಲಿ ಮಂಡಿಸಿದರು.

ವಕೀಲ ಕುಂಞ ಅಬ್ದುಲ್ಲ ಮಾತನಾಡಿ, ನಮಗರಿವಿಲ್ಲದೆ ನಮಗೆ ಯಾರಾದರು ಸಹಾಯ ಮಾಡುತ್ತಿರುತ್ತಾರೆ. ಅದೇ ರೀತಿ ನಾವುಗಳೂ ಅಸಹಾಯಕರಿಗೆ ಸಹಾಯ ಮಾಡಬೇಕು ಎಂದರು. ಅಧ್ಯಕ್ಷ ರವಿ ಗೌಡ ಮಾತನಾಡಿ, ಮಡಿಕೇರಿ ನಗರದ ಅವ್ಯವಸ್ಥೆಗಳ ಬಗ್ಗೆ ಪ್ರಸ್ತಾಪಿಸಿದ್ದಲ್ಲದೆ, ಈ ಹಿಂದೆ ಹಲವಾರು ಮೂಲಭೂತ ಸೌಕರ್ಯ ಗಳ ಕೊರತೆಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿ, ರಸ್ತೆ, ವಿದ್ಯುತ್, ಚರಂಡಿಯAತಹ ಸೌಕರ್ಯಗಳನ್ನು ಮಾಡಿಕೊಡಬೇಕೆಂದು ತಂಡದ ವತಿಯಿಂದ ಮನವಿ ನೀಡಿದ್ದೆವು. ಅದಕ್ಕೆಲ್ಲ ಪೌರಾಯುಕ್ತರು ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲೂ ಎಲ್ಲರ ಸಹಕಾರ ಬಯಸುತ್ತೇವೆ ಎಂದರು.

ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಶೋಭಾ, ಸಮಾಜ ಸೇವೆ ಫ್ರಾನ್ಸಿಸ್ ಡಿಸೋಜಾ, ಹೆಚ್.ಆರ್. ಸತೀಶ್ (ಶಕ್ತಿ ಆಶ್ರಮ), ವಿನು ಹಾಗೂ ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ಚರಂಡಿಯAತಹ ಸೌಕರ್ಯಗಳನ್ನು ಮಾಡಿಕೊಡಬೇಕೆಂದು ತಂಡದ ವತಿಯಿಂದ ಮನವಿ ನೀಡಿದ್ದೆವು. ಅದಕ್ಕೆಲ್ಲ ಪೌರಾಯುಕ್ತರು ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲೂ ಎಲ್ಲರ ಸಹಕಾರ ಬಯಸುತ್ತೇವೆ ಎಂದರು.

ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಶೋಭಾ, ಸಮಾಜ ಸೇವೆ ಫ್ರಾನ್ಸಿಸ್ ಡಿಸೋಜಾ, ಹೆಚ್.ಆರ್. ಸತೀಶ್ (ಶಕ್ತಿ ಆಶ್ರಮ), ವಿನು ಹಾಗೂ ಮಹೇಶ್ ಅವರನ್ನು ಸನ್ಮಾನಿಸಲಾಯಿತು.