ಹೆಬ್ಬಾಲೆ, ಮಾ. ೨೬: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲಾ ವ್ಯಾಪ್ತಿಗೆ ಸೇರುವ ವಾರ್ಡ್ಗಳಿಂದ ಚುನಾಯಿತ ರಾಗಿರುವ ಗ್ರಾಮ ಪಂಚಾಯಿತಿ ಸದಸ್ಯರನ್ನು ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಪೋಷಕರು ಮತ್ತು ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಮಂಜುನಾಥ್ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಮಂಜುನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರುಗಳಾದ ಜಾನಕಿ ಮತ್ತು ರಮೇಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದ ಅವರು ಅಧ್ಯಕ್ಷರು ಸದಸ್ಯರು ಮುಖ್ಯ ಶಿಕ್ಷಕರು ಸೇರಿ ಮೇಲುಸ್ತುವಾರಿ ನೋಡಿ ಕೊಂಡು ಶಾಲೆಯನ್ನು ಅಭಿವೃದ್ಧಿ ಪಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಮುಖ್ಯಶಿಕ್ಷಕ ಹೆಚ್.ಎಂ. ವೆಂಕಟೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಪುಷ್ಪವತಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕಿ ಬಬಿತಾ ವಂದಿಸಿದರು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಹೆಚ್.ಎಸ್. ಅರುಣಾಕುಮಾರಿ, ಸದಸ್ಯರಾದ ಪವಿತ್ರ, ಬಿ.ಪಿ. ನಾರಾಯಣ, ಎಚ್.ಡಿ. ಚಂದ್ರಶೇಖರ್ ಜೋಗಿ, ರತ್ನಮ್ಮ ಶಿಕ್ಷಕರುಗಳಾದ ಜಾನಕಿ ಮತ್ತು ರಮೇಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದ ಅವರು ಅಧ್ಯಕ್ಷರು ಸದಸ್ಯರು ಮುಖ್ಯ ಶಿಕ್ಷಕರು ಸೇರಿ ಮೇಲುಸ್ತುವಾರಿ ನೋಡಿ ಕೊಂಡು ಶಾಲೆಯನ್ನು ಅಭಿವೃದ್ಧಿ ಪಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಮುಖ್ಯಶಿಕ್ಷಕ ಹೆಚ್.ಎಂ. ವೆಂಕಟೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಪುಷ್ಪವತಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕಿ ಬಬಿತಾ ವಂದಿಸಿದರು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಹೆಚ್.ಎಸ್. ಅರುಣಾಕುಮಾರಿ, ಸದಸ್ಯರಾದ ಪವಿತ್ರ, ಬಿ.ಪಿ. ನಾರಾಯಣ, ಎಚ್.ಡಿ. ಚಂದ್ರಶೇಖರ್ ಜೋಗಿ, ರತ್ನಮ್ಮ ಹೆಚ್.ಬಿ., ಪರಮೇಶ್ ಹೆಚ್.ಜೆ., ಮಹದೇವ ಹೆಚ್.ಸಿ., ಪುಟ್ಟಲಕ್ಷಿö್ಮ, ಲತಾ, ಯಶಸ್ವಿನಿ ಹೆಚ್.ವಿ., ಶಿವನಂಜಪ್ಪ ಹೆಚ್.ಎನ್. ಮತ್ತು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಮೇಶ್, ಮೋಹನಕುಮಾರಿ, ಎಸ್.ಡಿ.ಎಂ.ಸಿ. ಸದಸ್ಯರಾದ ವಸಂತ್, ಮಂಜುನಾಥ, ಮಮತಾ, ಪೋಷಕರು, ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಹಾಜರಿದ್ದರು.
ಇದೇ ಸಂದರ್ಭ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಶಾಲಾ ಮುಂಭಾಗದಲ್ಲಿ ಸುಸಜ್ಜಿತವಾದ ಉದ್ಯಾನವನವನ್ನು ನಿರ್ಮಿಸಿ ಕೊಡುವುದರ ಜೊತೆಗೆ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.