ಭಾಗಮಂಡಲ, ಮಾ. ೨೬: ಇಲ್ಲಿನ ಶ್ರೀ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ೩೩ ವರ್ಷಗಳಿಂದ ಸೇವೆ ಸಲ್ಲಿಸಿ , ೨೩ ವರ್ಷಗಳ ಕಾಲ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮತ್ತಾರಿ ಜಾನಕಿ ಮೋಹನ್ ಮುಂದಿನ ಮೇ ತಿಂಗಳಲ್ಲಿ ವಯೋ ನಿವೃತ್ತಿ ಹೊಂದಲಿದ್ದು ಇವರು ಶಾಲೆಗೆ ಹಿತ್ತಳೆ ದೀಪಸ್ತಂಭ ಹಾಗೂ ಪೂಜಾ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಜೊತೆಗೆ ೧೦ ವಾಲಿಬಾಲ್, ೧೦ ಬಾಸ್ಕೆಟ್ ಬಾಲ್, ೧೦ ಫುಟ್ ಬಾಲ್ ಸೇರಿದಂತೆ ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‌ಗಳನ್ನು ನೀಡಿದ್ದು ಸಂಸ್ಥೆಯ ಅಧ್ಯಕ್ಷರಾದ ಹೊಸೂರು ಜ.ಸತೀಶ್ ಕುಮಾರ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಉಪಾಧ್ಯಕ್ಷರಾದ ಹ್ಯಾರೀಸ್, ಕಾರ್ಯದರ್ಶಿ ರವೀಂದ್ರ, ನಿರ್ದೇಶಕ ರವೀಂದ್ರ ಹೆಬ್ಬಾರ್, ನಂಜುAಡಪ್ಪ, ನಿರಂಜನ್, ಕುಯ್ಯಮುಡಿ ಮನೋಜ್, ಬಾರಿಕೆ ಪುಷ್ಪ, ಮುಖ್ಯ ಶಿಕ್ಷಕ ಶ್ರೀಕೃಷ್ಣ ಉಪಸ್ಥಿತರಿದ್ದರು.