ದೇಚೂರು ನಿವಾಸಿಗಳಿಂದ ತೀರ್ಮಾನ

ಮಡಿಕೇರಿ, ಮಾ. ೨೬: ನಗರದ ದೇಚೂರು ವಾರ್ಡ್ನ ರಸ್ತೆಗಳನ್ನು ದುರಸ್ತಿ ಪಡಿಸದ ನಗರಸಭೆಯ ನಿರ್ಲಕ್ಷö್ಯವನ್ನು ಖಂಡಿಸಿ ಸದ್ಯದಲ್ಲೇ ಬರಲಿರುವ ನಗರಸಭಾ ಚುನಾವಣೆಯನ್ನು ಬಹಿಷ್ಕರಿಸಲು ಇಲ್ಲಿನ ನಿವಾಸಿಗಳು ನಿರ್ಧರಿಸಿದ್ದಾರೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಮಡಿಕೇರಿ ತಾಲೂಕು ಕಾರ್ಯದರ್ಶಿ ಹಾಗೂ ಸ್ಥಳೀಯ ನಿವಾಸಿ ಉಮೇಶ್ ಗೌಡ ಪಿ. ತಿಳಿಸಿದ್ದಾರೆ.

ದೇಚೂರು ನಿವಾಸಿಗಳೊಂದಿಗೆ ತೆರಳಿ ನಗರಸಭಾ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ನಗರದ ಎಲ್ಲಾ ವಾರ್ಡ್ಗಳ ರಸ್ತೆಗಳನ್ನು ದುರಸ್ತಿ ಪಡಿಸಿ ಡಾಂಬರೀಕರಣ ಮಾಡಲಾಗಿದೆ. ಆದರೆ ದೇಚೂರಿನ ಎಲ್ಲಾ ರಸ್ತೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಸಂಪೂರ್ಣವಾಗಿ ಹೊಂಡ, ಗುಂಡಿಗಳಿAದ ಕೂಡಿದ್ದು, ವಾಹನಗಳ ಸಂಚಾರ ಅಸಾಧ್ಯವಾಗಿದೆ. ಒಂದು ತಿಂಗಳ ಹಿಂದೆ ಪೌರಾಯುಕ್ತರಿಗೆ ಮನವಿ ನೀಡಿದ ಸಂದರ್ಭ ತಕ್ಷಣ ಡಾಂಬರೀಕರಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆAದು ಉಮೇಶ್ ಗೌಡ ಆರೋಪಿಸಿದರು.

ಮನವಿ ಪತ್ರ ಸಲ್ಲಿಸಿ ಚುನಾವಣೆ ಬಹಿಷ್ಕರಿಸುವ ಕುರಿತು ತಿಳಿಸಿದ್ದೇವೆ. ಮುಂದಿನ ೭ ದಿನಗಳೊಳಗೆ ಡಾಂಬರೀಕರಣ ಕಾರ್ಯ ಆರಂಭಗೊಳ್ಳದಿದ್ದಲ್ಲಿ ನಿವಾಸಿಗಳೆಲ್ಲರೂ ಒಗ್ಗೂಡಿ ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ತಕ್ಷಣ ಡಾಂಬರೀಕರಣ ಕಾರ್ಯ ಆರಂಭಿಸಬೇಕು ಎಂದು ಒತ್ತಾಯಿಸಿರುವ ಉಮೇಶ್ ಗೌಡ, ನಿರ್ಲಕ್ಷö್ಯ ವಹಿಸಿದರೆ ಚುನಾವಣೆಯನ್ನು ಬಹಿಷ್ಕರಿಸುವುದು ಖಚಿತವೆಂದು ತಿಳಿಸಿದರು.