ಸೋಮವಾರಪೇಟೆ, ಮಾ.೨೬: ತಾಲೂಕಿನ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಣಾವರ ಗ್ರಾಮದ ಸ.ನಂ. ೪೮/೧ರಲ್ಲಿರುವ ಕೆರೆ ಜಾಗದ ಒತ್ತುವರಿಯನ್ನು ತಹಸೀಲ್ದಾರ್ ಆದೇಶದ ಹಿನ್ನೆಲೆ ಅಧಿಕಾರಿಗಳು ತೆರವುಗೊಳಿಸಿದರು.
ಒಟ್ಟು ೬.೧೨ ಎಕರೆ ಜಾಗ ಕೆರೆಗೆ ಸೇರಿದ್ದು, ಇದರಲ್ಲಿ ೨ ಏಕರೆ ಜಾಗವನ್ನು ಸ್ಥಳೀಯರು ಒತ್ತುವರಿ ಮಾಡಿ ಕೊಂಡಿದ್ದರು. ಇದನ್ನು ಸರ್ವೆ ನಡೆಸಿದ ನಂತರ ಒತ್ತುವರಿ ತೆರವುಗೊಳಿಸಿ, ಮುಂದಿನ ಕ್ರಮಕ್ಕಾಗಿ ಗಣಗೂರು ಗ್ರಾ.ಪಂ.ಗೆ ವಹಿಸಲಾಯಿತು.
ಈ ಸಂದರ್ಭ ಕಂದಾಯ ನಿರೀಕ್ಷಕ ಸಿ.ಎನ್. ಪ್ರಹ್ಲಾದ್, ಗ್ರಾಮ ಲೆಕ್ಕಿಗರಾದ ಹೆಚ್.ಎನ್. ಕುಮಾರಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕಾವೇರಿ, ಸರ್ವೆಯರ್ ರವಿ ಅವರುಗಳು ಉಪಸ್ಥಿತರಿದ್ದರು.