ಸೋಮವಾರಪೇಟೆ,ಮಾ.೨೬: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ರೂ.೩೫ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಸಬ್ಬಮ್ಮ ದೇವಿಯ ದೇವಾಲಯ ಲೋಕಾರ್ಪಣೆ ಹಾಗೂ ಕುಂಬಾಭಿಷೇಕ ಮಹೋತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ನೂತನ ದೇವಾಲಯ ಲೋಕಾರ್ಪಣೆ ನಿಮಿತ್ತ ಗುರುವಾರ ದಿಂದಲೇ ಹಾಸನದ ಕೃಷ್ಣ ಭಟ್ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಪ್ರಾರಂಭಗೊAಡಿದ್ದು, ಶುಕ್ರವಾರದಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಧ್ಯುಕ್ತವಾಗಿ ಕುಂಬಾಭಿಷೇಕ ಸಂಪನ್ನಗೊAಡಿತು.
ಕುಲದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊAಡ ಧಾರ್ಮಿಕ ಕಾರ್ಯದಲ್ಲಿ ಗ್ರಾಮ ದೇವತಾ ಪ್ರಾರ್ಥನೆ, ಮಹಾ ಸಂಕಲ್ಪ, ಪುಣ್ಯಾಹ ವಾಚನ, ಕಳಶ ಸ್ಥಾಪನೆ, ಮಂಡಲಾರಾಧನೆ, ಅಘೋರಾಸ್ತç ಹೋಮ, ಉತ್ಸವ ಮೂರ್ತಿಗೆ ಪಂಚಗವ್ಯ ಶುದ್ಧಿ, ಅಗ್ನುö್ಯತ್ತಾರಣೆ, ಜಲ-ಕ್ಷೀರಾಭಿಷೇಕ, ಪೂರ್ಣಾಹುತಿ, ಮಹಾಮಂಗಳಾರತಿ, ದಿಗ್ಬಲಿ, ಪ್ರಕಾರ ಶುದ್ಧಿ ನಡೆಯಿತು.
ಇದರೊಂದಿಗೆ ಕಳಸ ಮೆರವಣಿಗೆ, ಪ್ರತಿಷ್ಠಾಂಗ ಹೋಮ, ನಿರೀಕ್ಷಣೆ, ಕಳಸ ಸ್ಥಾಪನೆ, ಗಂಗೆ ಪೂಜೆ, ದುರ್ಗಾ ಹೋಮ, ಪೂರ್ಣಾಹುತಿ, ಕುಂಬಾಭಿಷೇಕ, ಅಲಂಕಾರ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.
ಸಬ್ಬಮ್ಮ ದೇವಾಲಯ ಸಮಿತಿ ಅಧ್ಯಕ್ಷ ಡಿ.ಎನ್. ರಾಜಗೋಪಾಲ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು. ಅತಿಥಿಗಳಾಗಿ ಬೆಂಗಳೂರಿನ ಹರಿಣಿ ಕರಿಗೌಡ, ದಾನಿಗಳಾದ ಹರಪಳ್ಳಿ ರವೀಂದ್ರ, ಗಿರೀಶ್ ಮಲ್ಲಪ್ಪ, ಮಾಜೀ ಎಂ.ಎಲ್.ಸಿ. ಮೇದಪ್ಪ ಎಸ್.ಜಿ., ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯ ಧರ್ಮಪ್ಪ, ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಶೇಖರ್, ಉಪನ್ಯಾಸಕಿ ತಿಲೋತ್ತಮೆ, ಜಿ.ಪಂ. ಎಇಇ ಟಿ.ಪಿ. ವೀರೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.