ಭಾಗಮಂಡಲ, ಮಾ. ೨೫: ಕೋವಿಡ್‌ನಿಂದಾಗಿ ಎರಡು ದಿನಗಳ ಕಾಲ ಮುಚ್ಚಲ್ಪಟ್ಟಿದ್ದ ಭಾಗಮಂಡಲ ದೇವಾಲಯ ತಾ. ೨೬ ರಿಂದ (ಇಂದಿನಿAದ) ಭಕ್ತರ ಪ್ರವೇಶಕ್ಕಾಗಿ ತೆರೆÀಯಲ್ಪಡಲಿದೆ. ನಿನ್ನೆ ದಿನ ವಾದ್ಯದ ಸಿಬ್ಬಂದಿಯೋರ್ವರಿಗೆ ಪಾಸಿಟಿವ್ ಬಂದಿದ್ದು, ಬಳಿಕ ಇತರ ೩೩ ಸಿಬ್ಬಂದಿಗೆ ಆರೋಗ್ಯ ಇಲಾಖೆಯಿಂದ ಟೆಸ್ಟ್ ಮಾಡಿಸಲಾಗಿತ್ತು. ನಿನ್ನೆ ಪಾಸಿಟಿವ್ ಬಂದಿದ್ದ ಯುವಕನ ತಂದೆ, ತಾಯಿ-ಇಬ್ಬರಿಗೆ ಇಂದು ಪಾಸಿಟಿವ್ ಗೋಚರಿಸಿದ್ದು ಇತರರಿಗೆ ನೆಗೆಟಿವ್ ಬಂದಿರುವದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ‘ಶಕ್ತಿ’ಗೆ ತಿಳಿಸಿದ್ದಾರೆ.ಈ ಮೂವರನ್ನು ೧೭ ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಅರ್ಚಕರೂ ಸೇರಿದಂತೆ ಉಳಿದ ಎಲ್ಲ ಸಿಬ್ಬಂದಿ ಎಂದಿನAತೆ ದೇವಾಲಯದ ಕೆಲಸ ನಿರ್ವಹಿಸಬಹುದಾಗಿದೆ ಎಂದು ಅವರು ಮಾಹಿತಿಯಿತ್ತರು. ೭ ದಿನ ಕಳೆದು ಮತ್ತೊಮ್ಮೆ ಟೆಸ್ಟ್ ಮಾಡಿಸಲಾಗುತ್ತದೆ ಎಂದರು.