ಶನಿವಾರಸಂತೆ, ಮಾ. ೨೫: ಸಮೀಪದ ಗಡಿಭಾಗ ಚಂಗಡಹಳ್ಳಿಯ ಭಜರಂಗದಳ ಘಟಕದ ವತಿಯಿಂದ ಪ್ರಥಮ ವರ್ಷದ ಭಜರಂಗಿ ಕಪ್ ಕ್ರೀಡಾಕೂಟ ತಾ. ೨೭ ಮತ್ತು ೨೮ ರಂದು ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪುರುಷರಿಗಾಗಿ ಕಬಡ್ಡಿ ಟೂರ್ನಿ ನಡೆಯಲಿದ್ದು, ಪ್ರಥಮ ಬಹುಮಾನ ರೂ. ೨೫ ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ನಗದು ರೂ. ೧೫ ಸಾವಿರ - ಆಕರ್ಷಕ ಟ್ರೋಫಿ ಹಾಗೂ ತೃತೀಯ ಬಹುಮಾನ ರೂ. ೭,೫೦೦. ಕ್ರಿಕೆಟ್ ಟೂರ್ನಿಯಲ್ಲಿ ಪ್ರಥಮ ಬಹುಮಾನ ರೂ. ೨೫ ಸಾವಿರ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೧೫ ಸಾವಿರ ಬಹುಮಾನ, ಸ್ಲೋ ಬೈಕ್ ರೇಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. ೫ ಸಾವಿರ ಹಾಗೂ ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಬಹುಮಾನ ರೂ. ೨,೫೦೦ ಹಾಗೂ ಆಕರ್ಷಕ ಟ್ರೋಫಿ ದೊರೆಯಲಿದೆ.
ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನ ರೂ. ೧೦ ಸಾವಿರ, ದ್ವಿತೀಯ ರೂ. ೫ ಸಾವಿರ ಜತೆಗೆ ಆಕರ್ಷಕ ಟ್ರೋಫಿ ದೊರೆಯಲಿದೆ. ರಂಗೋಲಿ, ಸಂಗೀತ ಕುರ್ಚಿ ಹಾಗೂ ೧೨ ವರ್ಷದೊಳಗಿನ ಮಕ್ಕಳಿಗಾಗಿ ಚಮಚ ಮತ್ತು ನಿಂಬೆ ಹಣ್ಣಿನ ಓಟದ ಸ್ಪರ್ಧೆ ನಡೆಯಲಿದೆ.
ತಾ. ೨೮ರ ಬೆಳಿಗ್ಗೆ ೧೧ ಗಂಟೆಯೊಳಗೆ ತಂಡಗಳು ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ. ೯೪೪೮೪೧೨೪೯೫ ಸಂಪರ್ಕಿಸುವAತೆ ಕೋರಿದ್ದಾರೆ.