ಕೊರೊನಾ ಮಧ್ಯೆ ಸಾಲು ಸಾಲು ಹಬ್ಬಗಳು: ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು, ಮಾ. ೨೫: ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರ ಶುರುವಾಗಿದೆ. ಇನ್ನು ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದ್ದು, ಈ ಹಿನ್ನೆಲೆ ಮುಂಬರುವ ಹಬ್ಬ, ಹರಿದಿನಗಳ ಆಚರಣೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಯುಗಾದಿ, ಹೋಳಿ, ಶಬ್ ಎ ಬರತ್, ಗುಡ್ ಫ್ರೆöÊಡೆ ಹಬ್ಬಗಳು ಬರುತ್ತಿರುವುದರಿಂದ ಗುಂಪುಗೂಡದAತೆ ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆಗೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳ, ಮೈದಾನ, ಪಾರ್ಕ್, ಮಾರ್ಕೆಟ್ ಮತ್ತು ಪ್ರಾರ್ಥನಾ ಮಂದಿರಗಳಲ್ಲಿ ಆಚರಣೆಯನ್ನು ನಿಷೇಧಿಸಿದೆ. ಆದೇಶವನ್ನು ಉಲ್ಲಂಘಿಸಿದರೆ ಕ್ರಮಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಎಚ್ಚರಿಸಿದೆ.

ಶ್ರೀನಗರದಲ್ಲಿ ಉಗ್ರರ ದಾಳಿ:ಸಿಆರ್‌ಪಿಎಫ್ ಅಧಿಕಾರಿ ಹುತಾತ್ಮ

ಶ್ರೀನಗರ, ಮಾ. ೨೫: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಸೇನಾಪಡೆಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು ಪರಿಣಾಮ ಓರ್ವ ಸೇನಾಧಿಕಾರಿ ಹುತಾತ್ಮರಾಗಿ ಮೂವರು ಸೈನಿಕರು ಗಾಯಗೊಂಡಿದ್ದಾರೆ. ಶ್ರೀನಗರದ ಹೊರವಲಯದಲ್ಲಿರುವ ಲಾವಾಯ್ ಪೆರಾದಲ್ಲಿ ಈ ದಾಳಿ ಸಂಭವಿಸಿದ್ದು, ಸೇನಾಪಡೆಗಳ ವಾಹನಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಓರ್ವ ಅಧಿಕಾರಿ ಹುತಾತ್ಮರಾಗಿದ್ದು, ಹುತಾತ್ಮರಾದ ಸೇನಾಧಿಕಾರಿಯನ್ನು ತ್ರಿಪುರಾ ಮೂಲದ ಮಂಗಾ ರಾಮ್ ದೇವ್ ಬರ್ಮನ್ ಎಂದು ಗುರುತಿಸಲಾಗಿದೆ. ಇವರು ಸಿಆರ್‌ಪಿಎಫ್ ಸಬ್‌ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಂತೆಯೇ ಘಟನೆಯಲ್ಲಿ ಇತರ ಮೂವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡ ಸೈನಿಕರನ್ನು ಕಾನ್‌ಸ್ಟೇಬಲ್ ನಜೀಮ್ ಅಲಿ, ಜಗನ್ನಾಥ್ ರೇ ಮತ್ತು ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಸೈನಿಕರನ್ನು ಸ್ಥಳೀಯ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸತತ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಕಡಿತ

ನವದೆಹಲಿ, ಮಾ. ೨೫: ಸತತ ದರ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರರು ತುಸು ನಿಟ್ಟುಸಿರು ಬಿಡುವಂತೆ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸತತ ಎರಡನೇ ಬಾರಿಗೆ ದರ ಇಳಿಕೆಯಾಗಿದೆ. ಗುರುವಾರ ಪೆಟ್ರೋಲ್ ದರ ೨೧ ಪೈಸೆ ಮತ್ತು ಡೀಸೆಲ್ ದರ ಲೀಟರ್‌ಗೆ ೨೦ ಪೈಸೆ ಇಳಿಕೆಯಾಗಿದೆ. ಫೆಬ್ರವರಿ ತಿಂಗಳ ಬಳಿಕ ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇಂದು ೯೦ ರೂಪಾಯಿ ೯೯ ಪೈಸೆಯಿಂದ ೯೦ ರೂಪಾಯಿ ೭೮ ಪೈಸೆಗೆ ಇಳಿಕೆಯಾಗಿದೆ. ಡೀಸೆಲ್ ಬೆಲೆ ೮೧ ರೂಪಾಯಿ ೩೦ ಪೈಸೆಯಿಂದ ೮೧ ರೂಪಾಯಿ ೧೦ ಪೈಸೆಗೆ ಇಳಿದಿದೆ. ದೇಶಾದ್ಯಂತ ಈ ಇಳಿಕೆ ದರ ಅನ್ವಯವಾಗುತ್ತಿದ್ದು, ಸ್ಥಳೀಯ ತೆರಿಗೆ ಪದ್ಧತಿಯ ಲೆಕ್ಕಾಚಾರದಿಂದ ರಾಜ್ಯದಿಂದ ರಾಜ್ಯಕ್ಕೆ ಇಂಧನ ದರ ವ್ಯತ್ಯಾಸವಿರುತ್ತದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಇಂದಿನ ದರ ೯೦.೯೮ ರೂ. ಮುಂಬೈ ೯೭.೧೯ ರೂ. ಚೆನ್ನೈ ೯೨.೭೭ ರೂ. ಇನ್ನು ಬೆಂಗಳೂರಿನಲ್ಲಿ ೯೩.೨೮ ರೂಪಾಯಿ ಇದೆ. ಇನ್ನು ನಿನ್ನೆಯಷ್ಟೇ ಪೆಟ್ರೋಲ್ ಬೆಲೆಯಲ್ಲಿ ೧೮ ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ ೧೭ ಪೈಸೆ ಇಳಿಯಾಗಿತ್ತು.

ಸೇನೆಯಲ್ಲಿ ಮಹಿಳೆಯರ ಶಾಶ್ವತ ಆಯೋಗ: ಸುಪ್ರೀಂ ಕೋರ್ಟ್

ನವದೆಹಲಿ, ಮಾ. ೨೫: ಸೇನೆಯಲ್ಲಿ ಶಾಶ್ವತ ಆಯೋಗ ನೀಡುವಂತೆ ಕೋರಿ ಹಲವಾರು ಮಹಿಳಾ ಎಸ್‌ಎಸ್‌ಸಿ ಅಧಿಕಾರಿಗಳು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ದೈಹಿಕ ಕ್ಷಮತೆ ಆಧಾರದಲ್ಲಿ ಮಹಿಳಾ ಅಧಿಕಾರಿಗಳನ್ನು ಶಾಶ್ವತ ಆಯೋಗದಿಂದ ಹೊರಗಿಡುವುದು ಸರಿಯಲ್ಲ ಮತ್ತು ಎಸಿಆರ್ ಮೌಲ್ಯಮಾಪನ ದೋಷಪೂರಿತ ಎಂದು ಗುರುವಾರ ಹೇಳಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶ ಜಾರಿಗೊಳಿಸುವಂತೆ ಕೋರಿ ಹಲವು ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಸ್ವಾತಂತ್ರö್ಯದ ನಂತರ, ಲಿಂಗ ತಾರತಮ್ಯ ಹೋಗಲಾಡಿಸಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶವನ್ನು ನೀಡಲು ಪ್ರಯತ್ನಿಸಲಾಗಿದೆ. ಈ ವಿಷಯವನ್ನು ಒಂದು ತಿಂಗಳೊಳಗೆ ಮರುಪರಿಶೀಲಿಸುವಂತೆ ಸೇನೆಗೆ ಸೂಚಿಸಿದೆ. ಮಹಿಳೆಯರಿಗೆ ಸೇನಾಪಡೆಗಳಲ್ಲಿನ ವೃತ್ತಿಯಲ್ಲಿ ಹಲವಾರು ಸವಾಲುಗಳಿವೆ. ಮಕ್ಕಳ ಲಾಲನೆ ಪಾಲನೆ ಹಾಗೂ ಮನೆಗಲಸಗಳ ಒತ್ತಡವನ್ನು ಅವರ ಮೇಲೆ ಹೇರಿದಾಗ ಇನ್ನಷ್ಟು ಕಷ್ಟವಾಗುತ್ತದೆ. ಶಾಶ್ವತ ಆಯೋಗವನ್ನು ನೀಡುವಾಗ ೧೦ ವರ್ಷಗಳ ಹಿಂದಿನ ಅವರ ದೈಹಿಕ ಕ್ಷಮತೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.

ಪಶ್ಚಿಮ ಘಟ್ಟದಲ್ಲಿ ಅರಣ್ಯ ತೆರವು: ಭೂ ಕುಸಿತದ ಆತಂಕ ಹೆಚ್ಚಳ

ಕಾರವಾರ, ಮಾ. ೨೫: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳ ಹಿಂದೆ ಯಲ್ಲಾಪುರದ ಸಂತೇಬೈಲ್ ಇಡಗುಂಡಿ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ನಾಲ್ಕು ಮಂದಿ ಕಾರ್ಮಿಕರು ಜೀವಂತ ಸಮಾಧಿಯಾದರು. ಮಂಗಳವಾರ ಸಿರಸಿಯ ಮತ್ತಿಗಟ್ಟ ಗ್ರಾಮದಲ್ಲಿ ಅಡಿಕೆ ತೋಟ ಸಂಪೂರ್ಣ ಭೂ ಕುಸಿತಕ್ಕೊಳಗಾಗಿದೆ, ಪಶ್ಚಿಮ ಘಟ್ಟಕ್ಕೆ ಹೊಂದಿಕೊAಡಿರುವ ಕಾಡುಗಳನ್ನು ತೆರವುಗೊಳಿಸುತ್ತಿರುವುದು ಭೂ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಅರಣ್ಯನಾಶ ಮತ್ತು ಭೂ ತೆರವುಗೊಳಿಸಲು ಭಾರೀ ಯಂತ್ರೋಪಕರಣಗಳ ಬಳಕೆಯಿಂದ ಭೂಕುಸಿತ ಉಂಟಾಗಿದೆ ಎಂದು ತಜ್ಞರು ಆರೋಪಿಸಿದ್ದಾರೆ. ದಶಕಗಳಿಂದ ಬೆಳೆಯುತ್ತಿರುವ ಸಸ್ಯಗಳಿಂದಾಗಿ ಪಶ್ಚಿಮ ಘಟ್ಟ ಸಡಿಲಗೊಳ್ಳುತ್ತಿದೆ. ಇದರ ಕೆಳಗೆ ಯಾವುದೇ ಕಲ್ಲಿನ ರಚನೆ ಇಲ್ಲದ ಕಾರಣ ಇಂತಹ ಅವಂತಾರ ಸಂಭವಿಸುತ್ತದೆ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಇಂತಹ ಅನೇಕ ಘಟನೆಗಳು ವರದಿಯಾಗುತ್ತಿದ್ದು, ಸಿರಸಿಯ ಜಾಜಿ ಗುಡ್ಡ ಸುತ್ತಮುತ್ತಲಿನ ಹಳ್ಳಿಗಳು ಮತ್ತು ಯಲ್ಲಾಪುರ ಮತ್ತು ಸಿದ್ದಾಪುರದ ಕೆಲವು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗುತ್ತಿದೆ. ನಾನು ಈ ಸ್ಥಳಗಳಿಗೆ ಪ್ರಯಾಣಿಸಿದ್ದೇನೆ. ಹೆಚ್ಚಿನ ಸಂದರ್ಭದಲ್ಲಿ ಜನರು ಬೆಳೆದ ಮರಗಳನ್ನು ಕಡಿಯುತ್ತಾರೆ, ಆದರೆ ಮತ್ತೆ ಅದೇ ಜಾಗದಲ್ಲಿ ಸಸಿ ಬೆಳೆಸುವುದಿಲ್ಲ ಎಂದು ದೂರಿದ್ದಾರೆ.

ಬೆಂಗಳೂರಿಗೆ ಬರುವ ಹೊರ ರಾಜ್ಯದ ಎಲ್ಲರಿಗೂ ಕೊರೊನಾ ಪರೀಕ್ಷೆ ಕಡ್ಡಾಯ

ಬೆಂಗಳೂರು, ಮಾ. ೨೫: ಬೆಂಗಳೂರಿಗೆ ಯಾವುದೇ ರಾಜ್ಯದಿಂದ ಬಂದರೂ ಕೋವಿಡ್ ವರದಿ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಬಿಬಿಎಂಪಿ ಎಂಟು ವಲಯಗಳ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಸಂಬAಧ ಸಭೆ ನಡೆಸಿದ ಬಳಿಕ ಸಚಿವರು ಮಾತನಾಡಿದರು. ಬೆಂಗಳೂರಿನಲ್ಲಿ ೧,೪೦೦ ಸೋಂಕಿತರು ಪತ್ತೆಯಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಇದು ಅತಿ ಹೆಚ್ಚು. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಹೊರ ರಾಜ್ಯಗಳಿಂದ ಬರುತ್ತಿರುವವರಲ್ಲಿ ಹೆಚ್ಚಾಗಿ ಕೋವಿಡ್ ಸೋಂಕು ಕಂಡುಬರುತ್ತಿದೆ. ಕರ್ನಾಟಕಕ್ಕೆ ಕೇರಳ, ಮಹಾರಾಷ್ಟç, ಪಂಜಾಬ್, ಚಂಡೀಗಡದಿAದ ಬಂದವರಿಗೆ ಮಾತ್ರ ಕೊರೊನಾ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಎಲ್ಲ ರಾಜ್ಯದಿಂದ ಬಂದವರಿಗೆ ಈ ನಿಯಮ ಅನ್ವಯಿಸಲು ತೀರ್ಮಾನಿಸಲಾಗಿದೆ ಎಂದರು. ಸಭೆ, ಸಮಾರಂಭಗಳಲ್ಲಿ ಒಳಾಂಗಣದಲ್ಲಿ ೨೦೦, ಹೊರಾಂಗಣದಲ್ಲಿ ೫೦೦ ಮಂದಿ ಸೇರಲು ಅವಕಾಶ ನೀಡಲಾಗಿದೆ. ಪ್ರತಿ ವಾರ್ಡ್ಗೆ ಒಂದರAತೆ ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ. ಸೋಂಕಿತರ ಸಂಖ್ಯೆ ನೀಡಿಕೊಂಡು ಆಂಬ್ಯುಲೆನ್ಸ್ ಸಂಖ್ಯೆ ಕೂಡ ಹೆಚ್ಚಿಸಲಾಗುವುದು. ಸೋಂಕಿತರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು, ನಿಗಾ ಇರಿಸುವುದು ಮೊದಲಾದ ಕ್ರಮಗಳನ್ನು ನಿರ್ಧರಿಸಲಾಗುವುದು ಎಂದರು.