ಮಡಿಕೇರಿ, ಮಾ. ೨೫: ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ಮಡಿಕೇರಿ ಕೊಡವ ಸಮಾಜದಲ್ಲಿ ಸೌಹಾರ್ದ ಸಹಕಾರಿಗಳ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿತ್ತು.
ಒಕ್ಕೂಟದ ಅಧ್ಯಕ್ಷ ನಾರಾಯಣರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮಾಜಿ ಸಚಿವ ಹಿರಿಯ ಸಹಕಾರಿ ಯಂ.ಸಿ. ನಾಣಯ್ಯ ಅವರು ಉದ್ಘಾಟಿಸಿದರು. ಸೌಹಾರ್ದ ಸಹಕಾರಿಯ ಕಾಯ್ದೆಯು ಜಾರಿಗೆ ಬಂದ ಹಿನ್ನೆಲೆ ಈಗ ಸುಮಾರು ೫೮೦೦ ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸರಕಾರದ ಅಧಿಕಾರಿಗಳ ಹಸ್ತಕ್ಷೇಪವಿಲ್ಲದೇ ಸಹಕಾರಿಗಳೇ ಸಹಕಾರಿಗಳ ಮುಖಾಂತರ ಸಹಕಾರಿಗಳ ಪಾಲು ಬಂಡವಾಳದ ಮೂಲಕ ಸಂಘಗಳನ್ನು ನಡೆಸಬೇಕು. ಯಾವುದೇ ಸಂದರ್ಭದಲ್ಲೂ ರಾಜಕೀಯ ಹಸ್ತಕ್ಷೇಪವಿಲ್ಲದೇ ಸಹಕಾರ ಸಂಘಗಳು ಕಾರ್ಯನಿರ್ವಹಿಸಬೇಕು ಎಂದು ನಾಣಯ್ಯ ಅವರು ಹೇಳಿದರು.
ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್. ನಾರಾಯಣರಾವ್ ಮಾತನಾಡಿ, ಒಕ್ಕೂಟವು ಸ್ಥಾಪನೆಯಾದ ವಿಚಾರ ಹಾಗೂ ಅದರ ದ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು. ಕೊಡಗು ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್‌ನ ಅಧ್ಯಕ್ಷ ಮುಂಡುವAಡ ಪಿ. ಮುತ್ತಪ್ಪ ಅವರು ಪ್ರಾಮಾಣಿಕತೆ ನಿಷ್ಠೆಯಿಂದ ಸಹಕಾರಿಗಳ ಕಾರ್ಯ ನಿರ್ವಹಣೆ ಬಗ್ಗೆ ವಿವರಿಸಿದರು.
ಬೋಜಪ್ಪ ಕಳ್ಳೇಂಗಡ ಪ್ರಾರ್ಥಿಸಿದರು. ಕ.ರಾ.ಸೌ.ಸಂ. ಸಹಕಾರಿಯ ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಶಿವಕುಮಾರ್ ಬಿರಾದಾರ ಹಾಗೂ ಒಕ್ಕೂಟದ ನಿರ್ದೇಶಕರುಗಳಾದ ಚೋವಂಡ ಡಿ. ಕಾಳಪ್ಪ, ಸೋಮಪ್ಪ, ಹೆಚ್.ಎನ್. ನವೀನ್ ವೇದಿಕೆಯಲ್ಲಿ ಹಾಜರಿದ್ದರು. ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಗೀರಥ ನಿರೂಪಣೆ ಮಾಡಿದರು. ಒಕ್ಕೂಟದ ನಿರ್ದೇಶಕ ಸಿ.ಡಿ. ಕಾಳಪ್ಪ ಸ್ವಾಗತಿಸಿ, ಸೋಮಪ್ಪ ವಂದಿಸಿದರು. ಕೊಡಗು ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾದಿಕಾರಿ ಕೆ.ಎನ್. ಚೋಂದಮ್ಮ ಉಪಸ್ಥಿತರಿದ್ದರು. ಸಭೆಯಲ್ಲಿ ಒಕ್ಕೂಟದ ನಿರ್ದೇಶಕರು ಹಾಗೂ ಕೊಡಗು ಜಿಲ್ಲೆಯ ಸೌಹಾರ್ದ ಸಹಕಾರಿಯ ಸುಮಾರು ೭೦ ಜನ ಸೌಹಾರ್ದ ಸಹಕಾರಿಗಳು ಭಾಗವಹಿಸಿದ್ದರು