ಮಡಿಕೇರಿ, ಮಾ. ೨೫: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಹಾಗೂ ಜಿಲ್ಲೆಯ ಪ್ರಖ್ಯಾತ ಫುಟ್ಬಾಲ್ ಕ್ಲಬ್ ಆದ ಮಿಲನ್ಸ್ ಫುಟ್ಬಾಲ್ ಕ್ಲಬ್ ಸಹಯೋಗದಲ್ಲಿ ಏಪ್ರಿಲ್ ೧೦ ರಿಂದ ೨೫ ರವರೆಗೆ ಅಮ್ಮತ್ತಿಯ ಕೊಡಗು ಫುಟ್ಬಾಲ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿರುವ ಕಾಲ್ಚೆಂಡು ಪಂದ್ಯಾಟದ ಟೈಸ್ ಪ್ರತಿಯನ್ನು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಲೀಗ್ ಪಂದ್ಯಾಟದ ಉಸ್ತುವಾರಿ ಮಿಲನ್ಸ್ ಫುಟ್ಬಾಲ್ ಕ್ಲಬ್ ಪ್ರಮುಖ ಲಿಜೇಶ್ ಬಿಡುಗಡೆ ಮಾಡಿದರು.
ಟೈಸ್ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಎಲ್ಲಾ ತಂಡದ ಪ್ರತಿ ಆಟಗಾರರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಹಾಗೂ ಮಿಲನ್ಸ್ ಫುಟ್ಬಾಲ್ ಕ್ಲಬ್‌ನೊಂದಿಗೆ ಕೈ ಜೋಡಿಸಿದರೆ ಮಾತ್ರ ಪಂದ್ಯಾಟ ಯಶಸ್ಸುಗೊಳ್ಳಲು ಸಾಧ್ಯ. ಎಲ್ಲಾ ತಂಡದ ಆಟಗಾರರು, ಕೋವಿಡ್ ನಿಯಮಗಳನ್ನು ಪಾಲಿಸಬೇಕಾಗಿ ಮನವಿ ಮಾಡಿದರು.
ಜಿಲ್ಲಾ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ, ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ಈಗಾಗಲೇ ಜಿಲ್ಲಾ ಫುಟ್ಬಾಲ್ ಸಂಸ್ಥೆಯಲ್ಲಿ ನೋಂದಣಿಯಾದ ೧೬ ತಂಡಗಳನ್ನು ೪ ಗುಂಪುಗಳಾಗಿ ವಿಂಗಡಿಸಲಾಗಿದ್ದು, ಲೀಗ್ ಹಂತದಲ್ಲಿ ಪ್ರತಿ ತಂಡಕ್ಕೆ ಮೂರು ಪಂದ್ಯಗಳು ಆಡಲು ಅವಕಾಶವಿದೆ. ಲೀಗ್ ಹಂತದಲ್ಲಿ ನಾಲ್ಕು ಗುಂಪುಗಳಿAದ ಮೊದಲ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುತ್ತವೆ ಎಂದರು.
ಯಶಸ್ಸುಗೊಳ್ಳಲು ಸಾಧ್ಯ. ಎಲ್ಲಾ ತಂಡದ ಆಟಗಾರರು, ಕೋವಿಡ್ ನಿಯಮಗಳನ್ನು ಪಾಲಿಸಬೇಕಾಗಿ ಮನವಿ ಮಾಡಿದರು.
ಜಿಲ್ಲಾ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ, ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ಈಗಾಗಲೇ ಜಿಲ್ಲಾ ಫುಟ್ಬಾಲ್ ಸಂಸ್ಥೆಯಲ್ಲಿ ನೋಂದಣಿಯಾದ ೧೬ ತಂಡಗಳನ್ನು ೪ ಗುಂಪುಗಳಾಗಿ ವಿಂಗಡಿಸಲಾಗಿದ್ದು, ಲೀಗ್ ಹಂತದಲ್ಲಿ ಪ್ರತಿ ತಂಡಕ್ಕೆ ಮೂರು ಪಂದ್ಯಗಳು ಆಡಲು ಅವಕಾಶವಿದೆ. ಲೀಗ್ ಹಂತದಲ್ಲಿ ನಾಲ್ಕು ಗುಂಪುಗಳಿAದ ಮೊದಲ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುತ್ತವೆ ಎಂದರು.
ಎಫ್.ಸಿ. ಅಮ್ಮತ್ತಿ, ಯಂಗ್ ಇಂಡಿಯಾ ಪಾಲಿಬೆಟ್ಟ,ಹಳ್ಳಿಗಟ್ಟು ಎಫ್.ಸಿ ತಂಡಗಳು ಭಾಗವಹಿಸಲಿವೆ.
ಈ ಸಂದರ್ಭ ವೇದಿಕೆಯಲ್ಲಿ ಮಿಲನ್ಸ್ ಫುಟ್ಬಾಲ್ ಕ್ಲಬ್ ಲಿಜೇಶ್ ಅಮ್ಮತ್ತಿ, ರಾಜ್ಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಜಗದೀಶ್, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಐಚ್ಚೆಟ್ಟೀರ ಪೊನ್ನಪ್ಪ, ಉಪಾಧ್ಯಕ್ಷೆ ದೇಚಮ್ಮ, ಖಜಾಂಜಿ ದೀಪು ಮಾಚಯ್ಯ, ಸದಸ್ಯ ಜಗದೀಶ್ ಮರಗೋಡು, ಮಿಲನ್ಸ್ ಫುಟ್ಬಾಲ್ ಕ್ಲಬ್‌ನ ಎಲ್ಲಾ ಸದಸ್ಯರು ಹಾಗೂ ಜಿಲ್ಲಾ ಫುಟ್ಬಾಲ್ ಸಂಸ್ಥೆಯಲ್ಲಿ ನೋಂದಾಯಿತ ಎಲ್ಲಾ ತಂಡದ ನಾಯಕರು ಹಾಗೂ ವ್ಯವಸ್ಥಾಪಕರು ಇದ್ದರು.
-ಕೆ.ಎಂ. ಇಸ್ಮಾಯಿಲ್ ಕಂಡಕರೆ