ವೀರಾಜಪೇಟೆ, ಮಾ. ೨೫: ಕಾಫಿ ತೋಟ ವೊಂದರಲ್ಲಿ ಮರ ಕಸಿ ಮಾಡುತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮರಣಹೊಂದಿದ ಘಟನೆ ವೀರಾಜಪೇಟೆ ಕೆದಮುಳ್ಳೂರು ತೋಮರ ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ಕೆದಮುಳ್ಳೂರು ಗ್ರಾಮದ ನಿವಾಸಿ ಕೆ.ಕೆ. ಉತ್ತಯ್ಯ (ರವಿ-೫೭) ಮೃತಪಟ್ಟ ವ್ಯಕ್ತಿ. ಕೆದಮುಳ್ಳೂರು ಪಂಚಾಯಿತಿ ವ್ಯಾಪ್ತಿಯ ತೋಮರ ಗ್ರಾಮದ ಕೀತಿಯಂಡ ಮಂದಪ್ಪ ಎಂಬವರ ತೋಟದಲ್ಲಿ ಮರಗಳನ್ನು ಕಸಿ ಮಾಡಲು ಗುತ್ತಿಗೆ ಪಡೆದಿದ್ದ ಮಾಳೆಟೀರ ಜಪ್ಪು ಮತ್ತು ಕೋರಿಯಾರ್ ಕಿರಣ್ ಎಂಬವರೊAದಿಗೆ ಕಾಫಿ ತೋಟಕ್ಕೆ ಆಗಮಿಸಿದ್ದರು.
ಬೆಳಿಗ್ಗೆ ೧೧ರ ಸಮಯದಲ್ಲಿ ಸಿಲ್ವರ್ ಮರ ಕಸಿ ಮಾಡುತಿದ್ದ ಸಂದÀರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ. ಪರಿಣಾಮ ತಲೆ ಭಾಗಕ್ಕೆ ತೀವ್ರ ಸ್ಪರೂಪದ ಗಾಯಗಳಾಗಿದ್ದು, ರಕ್ತ ಸ್ರಾವವಾಗಿದೆ. ತಕ್ಷಣವೇ ವಾಹನದಲ್ಲಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತ ಸ್ರಾವ ಹೆಚ್ಚಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಉತ್ತಯ್ಯ ಮೃತಪಟ್ಟಿದ್ದಾರೆ.
ಮೃತರ ಪತ್ನಿ ಕೆ.ಯು. ಶಾರದ ಅವರು ನೀಡಿದ ದೂರಿನ ಅನ್ವಯ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.
-ಕೆ.ಕೆ.ಎಸ್., ವಿರಾಜಪೇಟೆ